w
Headlines
Home » HOSANAGARA | ಕಸಬಾ ಹೋಬಳಿಯಲ್ಲಿ ಅರಣ್ಯ ಒತ್ತುವರಿ ತೆರವು

HOSANAGARA | ಕಸಬಾ ಹೋಬಳಿಯಲ್ಲಿ ಅರಣ್ಯ ಒತ್ತುವರಿ ತೆರವು

GridArt 20240809 171954344.jpg

ಕಸಬಾ ಹೋಬಳಿಯಲ್ಲಿ ಅರಣ್ಯ ಒತ್ತುವರಿ ತೆರವು

ಹೊಸನಗರ:  ಅರಣ್ಯ ಪ್ರದೇಶ ಒತ್ತುವರಿ ಕುರಿತಂತೆ ತಾಲೂಕಿನ ಕಸಬಾ ಹೋಬಳಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ  ಶುಕ್ರವಾರ  ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿಗಳು ಸುಮಾರು ನಾಲ್ಕು ಎಕರೆ ಅರಣ್ಯ ಪ್ರದೇಶದ ಒತ್ತುವರಿ ತೆರವುಗೊಳಿಸಿ ಇಲಾಖೆಯ ವಶಕ್ಕೆ ಪಡೆದು ವಿವಿಧ ಕಾಡು ಜಾತಿಯ ಸಸಿಗಳನ್ನು ನೆಟ್ಟಿದ್ದಾರೆ.

ತಾಲೂಕಿನ ಕಸಬಾ ಹೋಬಳಿ ಹರಿದ್ರಾವತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಂಬೆಕೊಪ್ಪ ಗ್ರಾಮದ ಸ.ನಂ. 39, ಶುಂಠಿಕೊಪ್ಪ ಗ್ರಾಮದ ಸ.ನಂ.33ರ ಅಲಗೇರಿಮಂಡ್ರಿ ಮೀಸಲು ಅರಣ್ಯದಲ್ಲಿ ಎರಡು ಎಕರೆ ಹಾಗೂ ಹಿರೇಮೈತಿ ಗ್ರಾಮದ ಸ.ನಂ.ಒಂದರ ಹರಿದ್ರಾವತಿ ರಾಜ್ಯ ಅರಣ್ಯ ಪ್ರದೇಶದ ಎರಡು ಎಕರೆ ಅರಣ್ಯ ಭೂ ಪ್ರದೇಶದ ಒತ್ತುವರಿ ತೆರವುಗೊಳಿಸಿ ಸಸಿ ನೆಟ್ಟು ಸಿಬ್ಬಂದಿಗಳು ಹಸಿರೀಕರಣ ಮಾಡಿದ್ದಾರೆ.

ಅರಣ್ಯಾಧಿಕಾರಿ ರಾಘವೇಂದ್ರ ಒತ್ತುವರಿ ಸ್ಥಳದಲ್ಲಿರುವುದು..

ಒಟ್ಟಾರೆ ನಾಲ್ಕು ಎಕರೆ ಅರಣ್ಯ ಪ್ರದೇಶದ ಒತ್ತುವರಿ ತೆರವುಗೊಳಿಸಲಾಗಿದೆ.ರಾಜ್ಯ ಸರ್ಕಾರ ಅರಣ್ಯ ಭೂಮಿ ಅಕ್ರಮ ಒತ್ತುವರಿ ತೆರವುಗೊಳಿಸಲು ಸೂಚಿಸಿದ ಬೆನ್ನಲ್ಲೆ ತೆರವು ಕಾರ್ಯವನ್ನು ಇಲಾಖೆ ಚುರುಕಿಗೊಳಿಸಿದೆ.‌ 

ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹೊಸನಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ಒತ್ತುವರಿ ತೆರವು ಕಾರ್ಯ ನಡೆದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.