ರಿಪ್ಪನ್‌ಪೇಟೆ – ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಯುವಕನ ಬಂಧನ|Ripponpet

ರಿಪ್ಪನ್‌ಪೇಟೆ – ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಯುವಕನ ಬಂಧನ|Ripponpet

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಬಳಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಿದ್ದಪ್ಪನಗುಡಿ ನಿವಾಸಿ ಸಿದ್ದೇಶ್ ಬಂಧಿತ ಆರೋಪಿಯಾಗಿದ್ದಾನೆ.

ವೈದ್ಯಕೀಯ ಪರೀಕ್ಷೆಯಿಂದ ಆರೋಪಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವ ಹಿನ್ನಲೆಯಲ್ಲಿ ಮಾದಕ ದ್ರವ್ಯ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ.

ಘಟನೆಯ ಹಿನ್ನಲೆ :

ಶನಿವಾರ ರಾತ್ರಿ ವಿನಾಯಕ ವೃತ್ತದಲ್ಲಿ ರಿಪ್ಪನ್‌ಪೇಟೆ ಪೊಲೀಸರು ಗಸ್ತು ಸಂಚರಿಸುತ್ತಿರುವಾಗ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದವನನ್ನು ಕಂಡು ಆತನ ಬಳಿ ಹೋಗಿ ಆತನನ್ನು ವಿಚಾರಿಸಿದ್ದಾರೆ.

ಈ ಸಮಯದಲ್ಲಿ ಆರೋಪಿಯ ಮಾತು ತೊದಲುತ್ತಿದ್ದು, ಬಾಯಿಯಿಂದ ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ, ಆತನನ್ನು ಕೂಲಂಕುಷವಾಗಿ ವಿಚಾರಸಿದಾಗ ಆತನು ಬೀಡಿ ಜೊತೆ ಗಾಂಜಾ ಸೇರಿಸಿ ಸೇದಿದ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. 

ಕೂಡಲೇ  ಆತನನ್ನು ವೈದ್ಯಕೀಯ ತಪಾಸಣೆಗೆ ಮೆಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು, ಆತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದಕೀಯ ಪರೀಕ್ಷೆಯಿಂದ ದೃಡಪಟ್ಟಿರುವುದರಿಂದ ಈತನ ವಿರುದ್ಧ ಮಾದಕ ದ್ರವ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *