ರಿಪ್ಪನ್‌ಪೇಟೆಗೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ
ರಿಪ್ಪನ್‌ಪೇಟೆ : ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಂದು ಪಟ್ಟಣಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಕೊಪ್ಪಕ್ಕೆ ತೆರಳುತಿದ್ದ ಪ್ರಮೋದ್ ಮುತಾಲಿಕ್ ಪಟ್ಟಣದ ಅಶೋಕ್ ಗೌಡ ಹಾಲುಗುಡ್ದೇ ರವರ ಮನೆಗೆ ಭೇಟಿ ನೀಡಿ ನೆರೆದಿದ್ದ ಹಿಂದೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.
ಪ್ರಮೋದ್ ಮುತಾಲಿಕ್ ವಾಹನ ಚಾಲಕ ಹಾಗೂ ಅಪ್ತನಾಗಿರುವ ಶಬರೀಶ್ ರವರು ಪಟ್ಟಣದ ಅಶೋಕ್ ಗೌಡ ಹಾಲುಗುಡ್ದೇ ರವರ ಪುತ್ರನಾಗಿದ್ದು ಈ ಹಿನ್ನಲೆಯಲ್ಲಿ ಅವರ ಮನೆಗೆ ಭೇಟಿ ನೀಡಿದ್ದರು. ಮುತಾಲಿಕ್ ಆಗಮನದ ವಿಷಯ ತಿಳಿಯುತಿದ್ದಂತೆ ಅವರ ಅಭಿಮಾನಿಗಳು ಸ್ಥಳಕ್ಕೆ ಅಗಮಿಸಿದ್ದರು.
ಈ ಸಂಧರ್ಭದಲ್ಲಿ ತಿಮ್ಮಪ್ಪ ಬೆಳ್ಳೂರು , ಕಗ್ಗಲಿ ಲಿಂಗಪ್ಪ, ದೇವದಾಸ್ ಆರ್ ಆಚಾರ್ , ರಾಮಚಂದ್ರ ಕೆರೆಹಳ್ಳಿ , ಸುಧೀರ್ ಪಿ , ಭೋಜು ಹಾಲುಗುಡ್ಡೆ ,ಸೋಮಶೇಖರ್ ಕೆರೆಹಳ್ಳಿ , ಗಣೇಶ್ ಕುಕ್ಕಳಲೆ ಹಾಗೂ ಇನ್ನಿತರರಿದ್ದರು.