ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಭೋಜೆಗೌಡ ಭರ್ಜರಿ ಗೆಲುವು – ರಿಪ್ಪನ್‌ಪೇಟೆಯಲ್ಲಿ ಪಟಾಕಿ ಸಿಡಿಸಿ ,ಸಿಹಿ ಹಂಚಿ ಸಂಭ್ರಮಾಚರಣೆ
ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ ಮೈತ್ರಿ ಅಭ್ಯರ್ಥಿ ಭೋಜೆಗೌಡ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನೈರುತ್ಯ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಭೋಜೆಗೌಡ ಪ್ರಚಂಡ ಗೆಲುವು ಸಾಧಿಸುತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಬಾವುಟ ಹಿಡಿದ ಕಾರ್ಯಕರ್ತರು, ಪ್ರಧಾನಿ ಮೋದಿ,ಹೆಚ್ ಡಿ ದೇವೆಗೌಡ, ಯಡಿಯೂರಪ್ಪ, ಕುಮಾರಸ್ವಾಮಿ ಅವರ ಪರ ಘೋಷಣೆ ಕೂಗಿದರು.
ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 19479 ಮತಗಳು ಚಲಾವಣೆಯಾಗಿದ್ದು 821 ಮತಗಳು ಕುಲಗೆಟ್ಟಿವೆ. 18658 ಮತಗಳು ಸಿಂಧುವಾಗಿದ್ದು 9,330 ಖೋಟಾ ನಿಗದಿಯಾಗಿತ್ತು. 9,829 ಮತಗಳ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಭೋಜೇಗೌಡ ಗೆಲುವು ಸಾಧಿಸಿದ್ದಾರೆ.ಸಮೀಪದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥಗೆ 4562 ಮತಗಳು ಲಭಿಸಿವೆ.
ಈ ಸಂಧರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅರ್ ಎ ಚಾಬುಸಾಬ್ , ಬಿಜೆಪಿ ಮುಖಂಡರಾದ ಎಂ ಬಿ ಮಂಜುನಾಥ್ ,ತಾಲೂಕ್ ಜೆಡಿಎಸ್ ಅಧ್ಯಕ್ಷ ಎನ್ ವರ್ತೇಶ್ , ಮುಖಂಡರಾದ ಸುರೇಶ್ ಸಿಂಗ್ , ಸೋಮಶೇಖರ್ ದೂನ , ಪಿ ರಮೇಶ್ , ರಾಮಚಂದ್ರ , ಸುಧೀರ್ ಪಿ , ಮುರುಳಿ ಕೆರೆಹಳ್ಳಿ ,ಈಶ್ವರ್ ಮಳಕೊಪ್ಪ ಹಾಗೂ ಇನ್ನಿತರರಿದ್ದರು.