Headlines

Hosanagara | ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ – ಕೆ ಎಸ್ ಈಶ್ವರಪ್ಪ

Hosanagara | ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ – ಕೆ ಎಸ್ ಈಶ್ವರಪ್ಪ

ಹೊಸನಗರ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಹೇಳಿದರು.

ಪಟ್ಟಣದಲ್ಲಿ ರಾಷ್ಟ್ರಭಕ್ತ ಬಳಗದ ವತಿಯಿಂದ ಆಯೋಜಿಸಿದ್ದ ಬೃಹತ್ ರೋಡ್ ಷೋ ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಒಂದು ವಾರದ ಹಿಂದೆ 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದಿದ್ದೇ ಆದರೆ ಈಗಿನ ಜನ ಬೆಂಬಲ ನೋಡಿದರೆ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದೆನಿಸುತ್ತಿದೆ ಎಂದರು.


ಅಪ್ಪ ಮಕ್ಕಳ ಕೈಯಲ್ಲಿ‌ ಪಕ್ಷವಿದೆ ಎಂದು ಜನಸಾಮಾನ್ಯರು‌ ಮಾತನಾಡುತ್ತಾರೆ. ಸಾಮೂಹಿಕ ನಾಯಕತ್ವಕ್ಕೆ ಮಂಗಳ ಹಾಡಿದ್ದಾರೆ. ಪುತ್ರ ರಾಘವೇಂದ್ರ ಸೋಲುತ್ತಾನೆ ಎಂಬ ಭಯದಿಂದ ಯಡಿಯೂರಪ್ಪನವರು ಕಳೆದ ಮೂರು ದಿನಗಳಿಂದ ಸ್ವ ಕ್ಷೇತ್ರದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ 9 ಬಾರಿ ಎಂಎಲ್ಎ, 4 ಬಾರಿ ಸಿಎಂ 1 ಬಾರಿ ಎಂಪಿ, ಅವರ ಮಗ ರಾಘವೇಂದ್ರ 3 ಬಾರಿ ಎಂಪಿ ಆದರೂ. ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ನಿವಾರಣೆ ಮಾಡಲಿಲ್ಲ. ಭದ್ರಾವತಿಯ ಕಾರ್ಖಾನೆ ಪುನರ್ ಆರಂಭಿಸಿಲ್ಲ. ಹೀಗಾಗಿ ಶಿವಮೊಗ್ಗ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.

ಗೆದ್ದು ಜನರ ಋಣ ತೀರಿಸಿಯೇ ತೀರುತ್ತೇನೆ, ಮತ ಪಡೆದು ಜನರಿಗೆ ಮೋಸ ಮಾಡುವುದಿಲ್ಲ. ಸುಮ್ಮನೇ ಭರವಸೆ ಕೊಡಲ್ಲ ಗೆದ್ದ ಮೇಲೆ ಪ್ರಧಾನಿ ಮೋದಿ ಅವರ ಕಾಲಿಗೆ ಬಿದ್ದಾದರೂ ಶಿವಮೊಗ್ಗದ ಜನರ ಕೆಲಸ ಮಾಡಿಸುತ್ತೇನೆ ಎಂದರು.

ಅನೇಕ‌ ಹಳ್ಳಿಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪ್ರಚಾರ ಮಾಡಿಲ್ಲ.ಮತಗಟ್ಟೆಯಲ್ಲಿ ಟೇಬಲ್ ಹಾಕಲು ಕಾರ್ಯಕರ್ತರಿಲ್ಲ ಎಂದವರು ರಾಷ್ಟ್ರ ಭಕ್ತ ಬಳಗದ ಶಕ್ತಿ ಹೋಗಿ ನೋಡಿ ಬರಲಿ ಎಂದು ಶಾಸಕ ಆರಗ ಜ್ಞಾನೇಂದ್ರ ವಿರುದ್ದ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ , ಹುಂಚ ಹಾಗೂ ನಗರ ಭಾಗದಿಂದ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು.

ಈ ಸಂಧರ್ಭದಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ , ಮುಖಂಡರಾದ ತೀ ನಾ ಶ್ರೀನಿವಾಸ್ , ವಾಟಗೋಡು ಸುರೇಶ್ , ನಿರೂಪ್ ಕುಮಾರ್ , ತ ಮ ನರಸಿಂಹ , ಸಚಿನ್ ಗೌಡ , ಈಶ್ವರಪ್ಪ ಗೌಡ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *