Headlines

ಅದ್ದೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ ಸಂಭ್ರಮ | chariot festival

ಅಪಾರ ಭಕ್ತ ಜನಸ್ತೋಮದಲ್ಲಿ ರಿಪ್ಪನ್‌ಪೇಟೆಯ 
“ಶ್ರೀಸಿದ್ದಿವಿನಾಯಕಸ್ವಾಮಿಯ ಶ್ರೀಮನ್ಮಹಾರಥೋತ್ಸವ ಸಂಭ್ರಮ’’ 

ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು.


12.30 ಕ್ಕೆ ಶ್ರೀಸಿದ್ದಿವಿನಾಯಕ ರಥವೇರುತ್ತಿದ್ದಂತೆ ಸಿದ್ದಿವಿನಾಯಕ ಸ್ವಾಮಿಗೆ, ಜಗನ್ಮಾತೆ ಆನ್ನಪೂರ್ಣೇಶ್ವರಿ ದೇವಿಗೆ, ಜಯಘೋಷಣೆ ಮುಗಿಲು ಮುಟ್ಟಿತು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ ಈ ವರ್ಷದಲ್ಲಿ ಮಳೆ-ಬೆಳೆ ಸಂವೃದ್ದಿಯಾಗಿ ರೈತರ ಬದುಕು ಹಸನಾಗಲೆಂದು ಮತ್ತು ಜಗತ್ತಿನಲ್ಲೆಡೆ ಶಾಂತಿ ನೆಮ್ಮದಿಯನ್ನು ಕರುಣಿಸುವಂತಾಗಲೆಂದು ಸರ್ವರ ಪರವಾಗಿ ಸಿದ್ದಿವಿನಾಯಕ ದೇವರಲ್ಲಿ ಪ್ರಾರ್ಥಿಸಿದರು.


ಶಿವಮೊಗ್ಗದ ವೇ/ಬ್ರ.ವಸಂತಭಟ್ ಮತ್ತು ಚಂದ್ರಶೇಖರಭಟ್ ಹಾಗೂ ಗುರುರಾಜಭಟ್ ನೇತೃತ್ವದಲ್ಲಿ ಇಂದು ಮನ್ಮಹಾರಥೋತ್ಸವದ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ದಾಭಕ್ತಿಯಿಂದ ನೆರವೇರಿದವು. 


ಶ್ರೀಮನ್ಮಹಾರಥೋತ್ಸವ ಚಾಲನೆ ನೀಡುತ್ತಿದ್ದಂತೆ ಉತ್ಸವವವು ದೇವಸ್ಥಾನದಿಂದ ಹೊರಟು ವಿನಾಯಕ ವೃತ್ತದವರೆಗೆ ಸಹಸ್ರಾರು ಭಕ್ತ ಸಮೂಹದೊಂದಿಗೆ ಚಂಡೆ ವಾದ್ಯ ಮೇಳ ಯುವಕರ ತಂಡದ ಜಯಘೋಷಣೆಯಲ್ಲಿ ಬಿಸಿಲಯನ್ನು ಲೆಕ್ಕಿಸದೇ ಭಕ್ತರ ದಂಡು ರಥವನ್ನು ಎಳೆಯಲು ಮುಂದಾಗಿದ್ದು ವಿಶೇಷವಾಗಿತು. ಎರಡು ಟ್ಯಾಂಕರ್ ಮೂಲಕ ರಸ್ತೆಗೆ ನೀರು ಹರಿಸುವುದರೊಂದಿಗೆ ಉರಿ ಬಿಸಿಲಿನಲ್ಲಿಯೂ ಸಿದ್ದಿವಿನಾಯಕ ಸ್ವಾಮಿಯ ಮನ್ಮಹಾರಥೋತ್ಸವ ಮೆರವಣಿಗೆ ಮೆರಗು ತಂದಿತು. ಬಂದಂತಹ ಭಕ್ತರಿಗೆ ಉಚಿತವಾಗಿ ಕಬ್ಬಿನ ಹಾಲು ಮತ್ತು ಐಸ್‌ಕ್ರೀಮ್ ಹೀಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಹಲವು ಸಂಘಟನೆಯವರು ಸ್ವಪ್ರೇರಣೆಯಿಂದ ನೇರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಶೆಟ್ಟಿ, ಎನ್.ಸತೀಶ್,ಗಣೇಶ್ ಎನ್.ಕಾಮತ್, ಎಂ.ಡಿ.ಇಂದ್ರಮ್ಮ,ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುದೀಂದ್ರಪೂಜಾರಿ, ತುಳೋಜಿರಾವ್,ಸ್ವಾಮಿ ದೊಡ್ಡಿನಕೊಪ್ಪ,ವೈ.ಜೆ.ಕೃಷ್ಣ,ಉಮೇಶ್ ಆರ್.ಮಂಜನಾಯ್ಕ್,ಎಂ ಬಿ.ಮಂಜುನಾಥ್ ,ಎಂ.ಸುರೇಶ್‌ಸಿಂಗ್,ಸುದೀರ್ ಪಿ. ರವೀಂದ್ರಕೆರೆಹಳ್ಳಿ,ನಾಗರತ್ನದೇವರಾಜ್, ಎಸ್.ಎನ್.ಬಾಲಚಂದ್ರ,
ಕುಸುಮಾಬಾಲಚಂದ್ರ,ಪದ್ಮಾಸುರೇಶ್,ನಿವೃತ್ತ ಶಿಕ್ಷಕ ರಾಧಾಕೃಷ್ಣ, ಜಯಲಕ್ಷಿö್ಮಮೋಹನ್, ದೇವಸ್ಥಾನ ಸೇವಾ ಸಮಿತಿಯವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವದಲ್ಲಿ ಭಾಗವಹಿಸಿ ದೇವರದರ್ಶನಾಶೀರ್ವಾದ ಪಡೆದರು.

Leave a Reply

Your email address will not be published. Required fields are marked *