Ripponpet | ಸೂಚನ ಫಲಕವಿಲ್ಲದ ಡಿವೈಡರ್ ಗೆ ಕಾರು ಡಿಕ್ಕಿ ,ಓರ್ವ ಗಂಭೀರ – ನರ ಬಲಿಗಾಗಿ ಕಾಯುತ್ತಿದೆಯಾ ಲೋಕೋಪಯೋಗಿ ಇಲಾಖೆ.???


Ripponpete | ಸೂಚನ ಫಲಕವಿಲ್ಲದ ಡಿವೈಡರ್ ಗೆ ಕಾರು ಡಿಕ್ಕಿ ,ಓರ್ವ ಗಂಭೀರ – ನರ ಬಲಿಗಾಗಿ ಕಾಯುತ್ತಿದೆಯಾ ಲೋಕೋಪಯೋಗಿ ಇಲಾಖೆ.???


ರಿಪ್ಪನ್‌ಪೇಟೆ ಪಟ್ಟಣದ ಸಾಗರ ರಸ್ತೆಯ ಎಪಿಎಂಸಿ ಮುಂಭಾಗದಲ್ಲಿ ಸಮರ್ಪಕವಾದ ಸೂಚನ ಫಲಕವಿಲ್ಲದ ಕಾರಣ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಓರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಟಾಟಾ ಇಂಡಿಕಾ ಕಾರಿನಲ್ಲಿ ಇಬ್ಬರು ಸಣ್ಣ ಮಕ್ಕಳು ಸೇರಿದಂತೆ ಕೋಣಂದೂರು ಮೂಲದ ಐವರು ಪ್ರಯಾಣಿಸುತಿದ್ದರು. ದೇವದಾಸ್ ಎಂಬುವವರಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು ಪತ್ನಿ ಸವಿತಾ ರವರ ಕಾಲು ಮುರಿತವಾಗಿದೆ ,ಮಗಳು ಕೀರ್ತಿ ಎಂಬುವವರಿಗೂ ತಲೆಗೆ ಪೆಟ್ಟಾಗಿದೆ.


ಗಾಯಾಳುಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.


ಅವೈಜ್ಞಾನಿಕ ಡಿವೈಡರ್ :

ಸಾಗರ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತಿದ್ದು ಎಪಿಎಂಸಿ ಮುಂಭಾಗದಲ್ಲಿ ಡಿವೈಡರ್ ನಿರ್ಮಾಣ ಮಾಡಲಾಗಿದ್ದು ಆದರೆ ಡಿವೈಡರ್ ಗೆ ಯಾವುದೇ ಸೂಚನ ಫಲಕವಿಲ್ಲದ ಕಾರಣ ರಾತ್ರಿ ಸಮಯದಲ್ಲಿ ಅಪಘಾತ ನಡೆಯುತಿದ್ದು ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರನಿಗೆ ತಿಳಿಸಿದ್ದರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಲಾಗುತ್ತಿದೆ.

ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮಲ್ಲಿಕಾರ್ಜುನ್ ರಣೋತ್ಸಾಹದಲ್ಲಿ ಬಡವರ ವಾಸಿಸುವ ಮನೆಗಳನ್ನು ಕೆಡವಿ ಶ್ರೀಮಂತರ ವ್ಯಾಪಾರದ ಮಳಿಗೆಗಳನ್ನು ರಕ್ಷಿಸುವಲ್ಲಿ ತೋರುವ ಕಾಳಜಿ ಡಿವೈಡರ್ ಗೆ ಸೂಚನ ಫಲಕವನ್ನು ಅಳವಡಿಸುವಲ್ಲಿ ತೋರಿಸಲಿ ಎಂದು ಸ್ಥಳೀಯರು ಹೇಳುತಿದ್ದಾರೆ.

ಒಟ್ಟಾರೆಯಾಗಿ ವಾಹನ ಚಾಲಕರಿಗೆ ರಾತ್ರಿ ಸಮಯದಲ್ಲಿ ಡಿವೈಡರ್ ಗಮನಕ್ಕೆ ಬಾರದ ಹಿನ್ನಲೆಯಲ್ಲಿ ಈ ಸ್ಥಳದಲ್ಲಿ ಅಪಘಾತ ನಡೆಯುತ್ತಿದ್ದು ಕೂಡಲೇ ಈ ಸ್ಠಳದಲ್ಲಿ ಸೂಚನಾ ಫಲಕ ಅಳವಡಿಸಿ ಮುಂದಾಗುವ ಅನಾಹುತ ಭಾರಿ ಅನಾಹುತಗಳನ್ನು ತಡೆಯಲಿ ಎನ್ನುವುದೇ ಪೋಸ್ಟ್ ಮ್ಯಾನ್ ನ್ಯೂಸ್ ನ ಕಳಕಳಿ….

Leave a Reply

Your email address will not be published. Required fields are marked *