Hosanagara | ಅಕ್ರಮ ಮರಳು ಸಾಗಿಸುತಿದ್ದ ಹತ್ತು ಟಿಪ್ಪರ್ ಲಾರಿ ಪೊಲೀಸರ ವಶಕ್ಕೆ..!!!
ಹೊಸನಗರ : ಪಟ್ಟಣದ ಪೊಲೀಸರು ತಾಲ್ಲೂಕಿನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 10 ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಜು ರೆಡ್ಡಿ ನೇತ್ರತ್ವದಲ್ಲಿ ಶುಕ್ರವಾರ ರಾತ್ರಿ ತಾಲ್ಲೂಕಿನ ಮುಳುಗುಡ್ಡೆ, ಹರಿದ್ರಾವತಿ, ಈಚಲಕೊಪ್ಪ ಸುತ್ತಾ, ವಿಜಾಪುರ ಗ್ರಾಮಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 10 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಗಂಗಪ್ಪ, ಸುನೀಲ್, ರಂಜಿತ್‌ಕುಮಾರ್, ಮಾಯಪ್ಪ, ಸಂದೀಪ, ಅವಿನಾಶ್ ಪಾಲ್ಗೊಂಡಿದ್ದರು.
		 
                         
                         
                         
                         
                         
                         
                         
                         
                         
                        
