ಶಿವಮೊಗ್ಗ ಲೋಕಸಭಾ ಕ್ಷೇತ್ರದ 23 ಅಭ್ಯರ್ಥಿಗಳ ಚಿಹ್ನೆ ಮತ್ತು ಕ್ರಮ ಸಂಖ್ಯೆ ಯಾವುದು ..?? ಇಲ್ಲಿದೆ ಸಂಪೂರ್ಣ ಮಾಹಿತಿ

ಶಿವಮೊಗ್ಗ ಲೋಕಸಭಾ ಕ್ಷೇತ್ರದ 23 ಅಭ್ಯರ್ಥಿಗಳ ಚಿಹ್ನೆ ಮತ್ತು ಕ್ರಮ ಸಂಖ್ಯೆ ಯಾವುದು ..?? ಇಲ್ಲಿದೆ ಸಂಪೂರ್ಣ ಮಾಹಿತಿ


ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತವರ ಪಟ್ಟಿ ಅಂತಿಮಗೊಂಡಿದ್ದು ಬ್ಯಾಲೆಟ್‌ ಪೇಪರ್‌ ಸಿದ್ದಗೊಂಡಿದೆ. ಪೋಸ್ಟಲ್‌ ಮತದಾನ ಕೂಡ ಇನ್ನೇನು ಸದ್ಯದಲ್ಲಿಯೇ ಆರಂಭವಾಗಲಿದೆ.

ಯಾವ ಅಭ್ಯರ್ಥಿಗೆ ಯಾವ ನಂಬರ್‌ ಸಿಕ್ಕಿದೆ ..??

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ, ಗೀತಾ ಶಿವರಾಜ್‌ ಕುಮಾರ್‌ ರವರ ಹೆಸರು ಬ್ಯಾಲೆಟ್‌ ಪೇಪರ್‌ನಲ್ಲಿ ಮೊದಲಿಗೆ ಇರಲಿದೆ. ಅವರ ನಂತರ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ರವರ ಹೆಸರು ಬಂದಿದೆ. ಮೂರನೇ ನಂಬರ್‌ನಲ್ಲಿ ಬಹುಜನ ಸಮಾಜವಾದಿ ಪಕ್ಷದ ಎಡಿ ಶಿವಪ್ಪರವರ ಹೆಸರು ಇದೆ. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ ಈ ಮೂವರ ಹೆಸರು ಕ್ರಮವಾಗಿ 1,2,3 ರಂತೆ ಬಂದಿದೆ. 
ಇನ್ನೂ ನಾಲ್ಕನೇ ಕ್ರಮಾಂಕದಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅರುಣ ಕಾನಹಳ್ಳಿಯವರ ಹೆಸರಿದ್ದು, ಐದು ಮತ್ತು ಆರನೇ ಕ್ರಮಾಂಕದಲ್ಲಿ ಕರ್ನಾಟಕ ರಾಷ್ಟ್ರೀಯ ಸಮಿತಿಯ ಎಸ್‌ ಕೆ ಪ್ರಭು, ಯಂಗ್‌ ಸ್ಟಾರ್‌ ಎಂಪಾವರ್‌ ಮೆಂಟ್‌ ಪಾರ್ಟಿಯ ಮೊಹಮ್ಮದ್‌ ಯೂಸೂಬ್‌ ರವರ ಹೆಸರಿದೆ. ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇವರಾಗಿದ್ದಾರೆ. 


ಇತರೆ ಅಭ್ಯರ್ಥಿಗಳಾಗಿ ಎಳನೇ ಕ್ರಮಾಂಕದಲ್ಲಿ ಇಂತಿಯಾಜ್‌ ಎ ಅತ್ತಾರ್‌ ರವರ ಹೆಸರಿದ್ದು ಪಕ್ಷೇತರರಾಗಿ ನಿಂತಿರುವ ಕೆಎಸ್‌ ಈಶ್ವರಪ್ಪ ನವರಿಗೆ 8 ನೇ ಕ್ರಮಾಂಕ ಸಿಕ್ಕಿದೆ. ವಿಶೇಷ ಅಂದರೆ, ಇವರ ಹೆಸರಿನವರೇ ಆದ ಡಿಎಸ್‌ ಈಶ್ವರಪ್ಪ ನವರ ಕ್ರಮಾಂಕ ಸಂಖ್ಯೆ ಒಂಬತ್ತು.  

10 ನೇ ಕ್ರಮಾಂಕದಲ್ಲಿ  ಕಣಜೆ ಮಂಜುನಾಥ್‌ ಗೌಡ, 11 ನೇ ಕ್ರಮಾಂಕದಲ್ಲಿ  ಗಣೇಶ್‌ ಬಿ (ಬೆಳ್ಳಿ), 12 ನೇ ಕ್ರಮಾಂಕದಲ್ಲಿ ಚಂದ್ರಶೇಖರ್‌ ಹೆಚ್‌ಸಿ, 13 ನೇ ಕ್ರಮಾಂಕದಲ್ಲಿ  ಜಯದೇವ, 14 ನೇ ಕ್ರಮಾಂಕದಲ್ಲಿ ಜಾನ್‌ ಬೆನ್ನಿ, 15 ನೇ ಕ್ರಮಾಂಕದಲ್ಲಿ ಎನ್‌ವಿ ನವೀನ್‌ ಕುಮಾರ್‌ , 16 ನೇ ಕ್ರಮಾಂಕದಲ್ಲಿ ಪೂಜಾ ಅಣ್ಣಯ್ಯಾ, 17 ನೇ ಕ್ರಮಾಂಕದಲ್ಲಿ ಬಂಡಿ, 18 ನೇ ಕ್ರಮಾಂಕದಲ್ಲಿ  ರವಿಕುಮಾರ್‌ ಎನ್‌ , 19ನೇ ಕ್ರಮಾಂಕದಲ್ಲಿ ಶಿವರುದ್ರಯ್ಯಸ್ವಾಮಿ, 20 ನೇ ಕ್ರಮಾಂಕದಲ್ಲಿ ಶ್ರೀಪತಿ ಭಟ್‌,  21 ನೇ ಕ್ರಮಾಂಕದಲ್ಲಿ ಹೆಚ್‌ ಸುರೇಶ್‌ ಪೂಜಾರಿ, 22 ನೇ ಕ್ರಮಾಂಕದಲ್ಲಿ ಸಂದೇಶ್‌ ಶೆಟ್ಟಿ ಯವರಿದ್ದಾರೆ ಅಂತಿಮ ಹಾಗೂ 23 ನೇ ಕ್ರಮಾಂಕದಲ್ಲಿ ಇ ಹೆಚ್‌ ನಾಯಕ್‌ ರವರಿದ್ದಾರೆ.

ಶಿವಮೊಗ್ಗ ಲೋಕಸಭ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳಿಗೆ ಯಾವ ಯಾವ ಚಿಹ್ನೆ ದೊರೆಕಿದೆ ಇಲ್ಲಿದೆ ಮಾಹಿತಿ 

ಕ್ರಮ ಸಂಖ್ಯೆ 01ರ ಗೀತಾ ಶಿವರಾಜ್ ಕುಮಾರ್ ಗೆ ಕಾಂಗ್ರೆಸ್ ಪಕ್ಷದ ಚಿಹ್ನೆ ಹಸ್ತ, 

ಕ್ರಮ ಸಂಖ್ಯೆ 02ರ ಬಿ.ವೈ. ರಾಘವೇಂದ್ರರಿಗೆ ಬಿಜೆಪಿ ಪಕ್ಷದ ಚಿಹ್ನೆ ಕಮಲ, 

ಕ್ರಮ ಸಂಖ್ಯೆ 03ರ ಬಹುಜನ ಪಕ್ಷದ ಎ.ಡಿ.ಶಿವಪ್ಪನವರಿಗೆ ಆನೆ ಚಿಹ್ನೆ

ಕ್ರಮಸಂಖ್ಯೆ 04 ಉತ್ತಮ ಪ್ರಜಾಕೀಯ ಪಾರ್ಟಿಯ ಅರುಣ ಕಾನಹಳ್ಳಿರಿಗೆ ಆಟೋ ರಿಕ್ಷಾ ಚಿಹ್ನೆ

ಕ್ರಮಸಂಖ್ಯೆ 05ರ ಕರ್ನಾಟಕ ರಾಷ್ಟ್ರ‌ ಸಮಿತಿ ಪಕ್ಷದ ಅಭ್ಯರ್ಥಿ ಎಸ್ ಕೆ ಪ್ರಭುಗೆ ಬ್ಯಾಟರಿ ಚಾರ್ಚ್ ಚಿಹ್ನೆ

ಕ್ರಮ ಸಂಖ್ಯೆ 06ರ ಯಂಗ್ ಸ್ಟಾರ್ ಎಂಪವರ್ ಮೆಂಟ್ ಪಾರ್ಟಿಯ ಮೊಹಮ್ಮದ್ ಯೂನಸ್ ಖಾನ್ ಗೆ ಮೈಕ್ ಚಿಹ್ನೆ

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕ್ರಮಸಂಖ್ಯೆ 07 ರ ಇಂತಿಯಾಜ್ ಅತ್ತರ್ ಗೆ ಟ್ರಕ್ ಚಿಹ್ನೆ

ಕ್ರಮ ಸಂಖ್ಯೆ 08ರ ಕೆ.ಎಸ್ ಈಶ್ವರಪ್ಪನವರಿಗೆ ಕಬ್ಬು ಹಿಡಿದಿರುವ ರೈತ ಚಿಹ್ನೆ

ಕ್ರಮಸಂಖ್ಯೆ 09ರ ಡಿ.ಎಸ್.ಈಶ್ವರಪ್ಪರಿಗೆ ಉಂಗುರ ಚಿಹ್ನೆ

ಕ್ರಮಸಂಖ್ಯೆ 10ರ ಕುಣಿಜೆ ಮಂಜುನಾಥ್ ಗೌಡರಿಗೆ ತೆಂಗಿನ ತೋಟ ಚಿಹ್ನೆ

ಕ್ರಮಸಂಖ್ಯೆ 11 ಗಣೇಶ್. ಬಿ ( ಬೆಳ್ಳಿ)ರಿಗೆ ವಜ್ರ ಚಿಹ್ನೆ

ಕ್ರಮ ಸಂಖ್ಯೆ 12, ಚಂದ್ರಶೇಖರ್ ಹೆಚ್ ಸಿ ಅವರಿಗೆ ಕೊಳಲು ಚಿಹ್ನೆ

ಕ್ರಮಸಂಖ್ಯೆ 13, ಜಯದೇವ ಜಿ,ರವರಿಗೆ ಮಂಚ ಚಿಹ್ನೆ

ಕ್ರಮ ಸಂಖ್ಯೆ 14 ಜಾನ್ ಬೆನ್ನಿರಿಗೆ ದೂರವಾಣಿ ಚಿಹ್ನೆ

ಕ್ರಮ ಸಂಖ್ಯೆ 15 ರ ಎನ್ ವಿ ನವೀನ್ ಕುಮಾರ್ ಗೆ ಹವನಿಯಂತ್ರಿತ ಚಿಹ್ನೆ

ಕ್ರಮ ಸಂಖ್ಯೆ 16 ರ ಪೂಜಾ ಎನ್ ಅಣ್ಣಯ್ಯರಿಗೆ ಲ್ಯಾಪ್ ಟ್ಯಾಪ್, ಕ್ರಮ ಸಂಖ್ಯೆ 17 ರ ಬಂಡಿ ಎಂಬುವರಿಗೆ ಬ್ಯಾಟ್ಸಮನ್, ಕ್ರಮ ಸಂಖ್ಯೆ 18 ರ ರವಿಕುಮಾರ್ ಎನ್ ಗೆ ಕ್ರೇನ್, ಕ್ರಮ ಸಂಖ್ಯೆ 19 ರ ಶಿವರುದ್ರಯ್ಯ ಸ್ವಾಮಿಗೆ ಗಣಕಯಂತ್ರ, ಕ್ರಮ ಸಂಖ್ಯೆ 20 ರ ಶ್ರೀಪತಿ ಭಟ್ ರಿಗೆ ಬಲೂನ್,

ಕ್ರಮ ಸಂಖ್ಯೆ 21 ರ ಹೆಚ್ ಸುರೇಶ್ ಪೂಜಾರಿಗೆ ಬ್ಯಾಟ್, ಕ್ರಮ ಸಂಖ್ಯೆ 22ರ ಸಂದೇಶ್ ಶೆಟ್ಟಿ ಎಗೆ ಹಲಸಿನ ಹಣ್ಣು, ಕ್ರಮ ಸಂಖ್ಯೆ 23 ರ ಇ.ಎಚ್ ನಾಯಕರಿಗೆ ಏಳು ಕಿರಣಗಳಿರುವ ಪೆನ್ ನ ನಿಬ್ ಚಿಹ್ನೆಯನ್ನ ಚುನಾವಣೆ ಆಯೋಗ ನೀಡಿದೆ.

Leave a Reply

Your email address will not be published. Required fields are marked *