ಚುನಾವಣೆ ಹಿನ್ನೆಲೆ – ರಿಪ್ಪನ್‌ಪೇಟೆಯಲ್ಲಿ CRPF ಮಹಿಳಾ ತುಕಡಿಯಿಂದ ಪಥಸಂಚಲನ
ರಿಪ್ಪನ್‌ಪೇಟೆ : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಶಾಂತಿಯುತ ಮತದಾನಕ್ಕಾಗಿ ಸೆಂಟ್ರಲ್ ಪ್ಯಾರಾ ಮಿಲಿಟರಿ ಫೋರ್ಸ್(ಸಿಆರ್ ಪಿಎಫ್) ಮಹಿಳಾ ತುಕಡಿ ಮತ್ತು ಪೊಲೀಸ್ ಸಿಬ್ಬಂದಿಯಿಂದ ಶನಿವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಸಾರ್ವಜನಿಕರ ಗಮನ ಸೆಳೆಯಿತು.
ಪಟ್ಟಣದ ಶಿವಮೊಗ್ಗ ರಸ್ತೆಯಿಂದ ಪ್ರಾರಂಭವಾದ ಪಥಸಂಚಲನದಲ್ಲಿ ಸಿಆರ್ ಪಿ ಎಫ್ ಮತ್ತು ಪೊಲೀಸ್ ಸಿಬ್ಬಂದಿಗಳು ವಿನಾಯಕ ವೃತ್ತ ಮಾರ್ಗವಾಗಿ ಹೊಸನಗರ ರಸ್ತೆ ಮೂಲಕ ತೆರಳಿ ಮದೀನಾ ಕಾಲೋನಿಯಿಂದ ಸಾಗರ ರಸ್ತೆ ಮೂಲಕ ತೀರ್ಥಹಳ್ಳಿ ರಸ್ತೆಯಲ್ಲಿ ಸಾಗಿತು ನಂತರ ಚೌಡೇಶ್ವರಿ ಕಾಲೋನಿಯ ಮೂಲಕ ಶಿವಮೊಗ್ಗ ರಸ್ತೆಯ ಪೊಲೀಸ್ ಠಾಣೆ ಮುಂಭಾಗದಲ್ಲಿ ಪಥ ಸಂಚಲನ ಸಮಾಪ್ತಿಯಾಯಿತು.
ಪಿಎಸ್‌ಐ ನಿಂಗರಾಜ್ ಕೆ ವೈ ಹಾಗೂ CRPF ಇನ್ಸ್ ಪೆಕ್ಟರ್ ಅಮಿತಾ ಮೋಳ್ ,CRPF ಸಬ್ ಇನ್ಸ್ ಪೆಕ್ಟರ್ ಮೀನಾ ಪೊಲೀಸ್ ಸಿಬ್ಬಂದಿಗಳಾದ ಶಿವಕುಮಾರ್ ,ಸಂತೋಷ್ ಕೊರವರ , ಉಮೇಶ್ ಹಾಗೂ ಮಧುಸೂಧನ್ ಭಾಗವಹಿಸಿದ್ದರು.



