Headlines

ಲಂಚ ಪಡೆಯುತ್ತಿದ್ದ ಎಎಸ್‌ಐ ಲೋಕಾಯುಕ್ತರ ಬಲೆಗೆ..! | who was taking bribe was trapped.

ಲಂಚ ಪಡೆಯುತ್ತಿದ್ದ ASI ಲೋಕಾಯುಕ್ತರ ಬಲೆಗೆ!


ಓಸಿ ಆಡಿಸುವ ಅನುಮತಿಗಾಗಿ 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ASI ನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಶಿವಮೊಗ್ಗದ ಆರ್‌ಎಂಎಲ್ ನಗರದ ನಿವಾಸಿ ರಫೀಕ್ ಎಂಬುವರಿಂದ ಮಾಮೂಲಿ ರೂಪದಲ್ಲಿ ತಿಂಗಳಿಗೆ 1.20 ಲಕ್ಷ ಹಣ ನೀಡುವಂತೆ ಶಿವಮೊಗ್ಗದ ಸಿಇಎನ್ ಠಾಣೆಯ ಸಹಾಯಕ ಸಬ್ ಇನ್‌ಸ್ಟೆಕ್ಟರ್ ಮೊಹಮ್ಮದ್ ರೆಹಮಾನ್ ಬೇಡಿಕೆ ಇಟ್ಟಿದ್ದು ಅದರಂತೆ ಇಂದು 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.

ಚಿತ್ರದುರ್ಗದ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ಮಾಡಿದ್ದು ಲೋಕಾಯುಕ್ತ ಪೊಲೀಸರು ಸಾಮಾನ್ಯರಂತೆ ವೇಷ ಧರಿಸಿ ದಾಳಿ ಮಾಡಿ ಮೊಹಮ್ಮದ್ ರೆಹಮಾನ್ ರನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *