Headlines

ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿಸಿದರೆ ಕೆ ಎಸ್ ಈಶ್ವರಪ್ಪ ಮನೆ ಮುಂದೆ ಧರಣಿಗೆ ಚಿಂತನೆ – ಮಾಜಿ ಶಾಸಕ ಬಿ ಸ್ವಾಮಿರಾವ್ | Election

ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿಸಿದರೆ ಕೆ ಎಸ್ ಈಶ್ವರಪ್ಪ ಮನೆ ಮುಂದೆ ಧರಣಿಗೆ ಚಿಂತನೆ – ಮಾಜಿ ಶಾಸಕ ಬಿ ಸ್ವಾಮಿರಾವ್ 


ರಿಪ್ಪನ್‌ಪೇಟೆ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕೆ ಎಸ್ ಈಶ್ವರಪ್ಪ ಬಂಡಾಯವಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರೆ ಅವರ ಮನೆಯ ಮುಂದೆ ಧರಣಿ ನಡೆಸಲು ಚಿಂತನೆ ನಡೆಸಿದ್ದೇವೆ ಎಂದು ಮಾಜಿ ಶಾಸಕ ಬಿ ಸ್ವಾಮಿರಾವ್ ಹೇಳಿದರು.

ಪಟ್ಟಣದ ಸತ್ಕಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ಮತದಾರರ ಆಶೀರ್ವಾದದಿಂದ ಮೂರು ಬಾರಿ ಸಂಸತ್ ಸದಸ್ಯರಾಗಿವ್ ಆಯ್ಕೆಯಾಗಿರುವ ಬಿ ವೈ ರಾಘವೇಂದ್ರ ಜನಮೆಚ್ಚುವ ಆಭಿವೃದ್ದಿ ಕೆಲಸಗಳನ್ನು ನಡೆಸುತಿದ್ದಾರೆ. ಕೆ ಎಸ್ ಈಶ್ವರಪ್ಪ ರವರು ಬಿಜೆಪಿ ಪಕ್ಷದಿಂದ ರಾಜ್ಯದ ಉಪ ಮುಖ್ಯಮಂತ್ರಿ ,ರಾಜ್ಯಾಧ್ಯಕ್ಷ ,ಸಚಿವ ಸ್ಥಾನ ಸೇರಿದಂತೆ ಎಲ್ಲಾವನ್ನು ಪಡೆದು ಈಗ ಪಕ್ಷದ ನಿಲುವಿನ ವಿರುದ್ದ ನಡೆಸುತ್ತಿರುವ ಚಟುವಟಿಕೆಗಳು ಅವರಿಗೆ ಶ್ರೇಯ ತರುವುದಿಲ್ಲ ಎಂದರು.

ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿರುವ ಬಗ್ಗೆ ಅವರಿಗೆ ಅಸಮಾಧಾನವಿದ್ದರೆ ಹಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ದ ಬಂಡಾಯ ಸ್ಪರ್ಧಿಸಲಿ ಅದನ್ನು ಬಿಟ್ಟು ಜನ ಮೆಚ್ಚಿದ ಸಂಸದ ಬಿ ವೈ ರಾಘವೇಂದ್ರ ವಿರುದ್ದ ಸ್ಪರ್ಧಿಸಿರುವುದು ಅವರಿಗೆ ಶೋಭೆ ತರುವುದಿಲ್ಲಾ ,ಒಂದು ವೇಳೆ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರೆ ಶಿವಮೊಗ್ಗದ ಗುಂಡಪ್ಪ ಶೆಡ್ ನಲ್ಲಿರುವ ಅವರ ಮನೆ ಮುಂದೆ ಧರಣಿ ನಡೆಸಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ಸಮಾವೇಶದಲ್ಲಿ ಸಂಸದ ಬಿ ವೈ ರಾಘವೇಂದ್ರ , ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುಬ್ರಹ್ಮಣ್ಯ, ಮಹಿಳಾ ಅಧ್ಯಕ್ಷೆ ಆಶಾ ರವೀಂದ್ರ, ಮುಖಂಡರಾದ ವೀಣಾಶೆಟ್ಟಿ, ಜೆಡಿಎಸ್ ಮುಖಂಡರಾದ ಆರ್.ಎ.ಚಾಬುಸಾಬ್, ಎನ್ ವರ್ತೇಶ್, ಜಿ.ಎಸ್.ವರದರಾಜ್, ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಸರಸ್ವತಿ, ಲೀಲಾ ಉಮಾಶಂಕರ್, ರೇಖಾ ರವಿ, ಪದ್ಮಾ ಸುರೇಶ್, ಗಣಪತಿ ಬಿಳಗೋಡು ಇನ್ನಿತರರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *