ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು..! | BREAKING

ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು..! | BREAKING


ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ನಿರ್ಮಾಪಕಿ ಗೀತಾ ಶಿವರಾಜ್​ಕುಮಾರ್ ಅವರ ಪರವಾಗಿ ಪತಿ ಶಿವರಾಜ್ ಕುಮಾರ್ ಭರ್ಜರಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಬೇಸಿಗೆಯ ತೀವ್ರತೆಯಿಂದಾಗಿ ಶಿವರಾಜ್​ ಕುಮಾರ್​ ಸುಸ್ತಾಗಿದ್ದರು. ಶಿವಣ್ಣ ಅವರ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆಪ್ತ ಮೂಲಗಳು ತಿಳಿಸಿವೆ.

ಆಗಿದ್ದೇನು..??

 ದೇವನಹಳ್ಳಿ ಬಳಿ ಚಿತ್ರೀಕರಣದ ವೇಳೆ ಸುಸ್ತಾಗ್ತಿದೆ ಎಂದ ಶಿವರಾಜ್​ ಕುಮಾರ್ ಅವರು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದು ಕೆಲವು ಪರೀಕ್ಷೆಗಳನ್ನು ಮಾಡಿಸಿ ವರದಿ ಪಡೆದು ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಭಾನುವಾರ ಮತ್ತೆ ಶೂಟಿಂಗ್ ಸೆಟ್​ನಲ್ಲಿ ಧೂಳು ಆವರಿಸಿ ಮತ್ತೆ ಸುಸ್ತಾಗಿದ್ದಾರೆ ಎನ್ನಲಾಗಿದೆ. ಶಿವಣ್ಣ ಮತ್ತೆ (ಇಂದು) ಸೋಮವಾರ ಚಿಕಿತ್ಸೆ ಆಸ್ಪತ್ರೆಗೆ ತೆರಳಿದಿದ್ದಾರೆ. ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರ ಸೂಚನೆ ನೀಡಿದ್ದರಿಂದ ಶಿವರಾಜ್​ ಕುಮಾರ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಿವರಾಜ್​ ಕುಮಾರ್​ ಅವರ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆಪ್ತ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *