Headlines

ಅಪರಿಚಿತ ಶವ ಪತ್ತೆ – ಗುರುತು ಪತ್ತೆಗೆ ಮನವಿ | Crime News

ಅಪರಿಚಿತ ಶವ ಪತ್ತೆ – ಗುರುತು ಪತ್ತೆಗೆ ಮನವಿ

ಶಿವಮೊಗ್ಗದ ಗಾಜನೂರು ಬಸ್ ನಿಲ್ದಾಣದ ಮುಂಭಾಗದ ಪುಟ್‍ಪಾತ್‍ನ ಸಿಮೆಂಟ್ ಕಟ್ಟೆಯ ಮೇಲೆ ಬಿದ್ದಿರುವ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.  

ಸುಮಾರು 45-50 ವರ್ಷ ವಯಸ್ಸಿನ ಅವರನ್ನು ಸಾರ್ವಜನಿಕರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯರು ವ್ಯಕ್ತಿಯು ಮೃತಪಟ್ಟಿರುವುದಾಗಿ ದೃಢೀಕರಿಸಿದ್ದಾರೆ. ಇನ್ನೂ ಮೃತರ ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. 

ಮೃತರ ಗುರುತು ಹೀಗಿದೆ 

ಮೃತನು ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, 05.10 ಅಡಿ ಎತ್ತರವಿರುತ್ತಾರೆ. ಎಡ ಕೈನ ಮುಂಗೈನಲ್ಲಿ ಅಸ್ಪಷ್ಟ ಕನ್ನಡ ಅಕ್ಷರದ ಹಚ್ಚೆ ಗುರುತು ಇರುತ್ತದೆ. ಹಣೆಯ ಮೇಲೆ ತರಚು ಗಾಯವಾಗಿದ್ದು, ಮೈಮೇಲೆ ನೀಲಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ನೀಲಿ ಬಣ್ಣದ ನೈಟ್ ಪ್ಯಾಂಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಮೃತನು ಸುಮಾರು 02 ಇಂಚು ಉದ್ದದ ಬಿಳಿ ಕಪ್ಪು ಮಿಶ್ರಿತ ಕೂದಲು ಬಿಟ್ಟಿದ್ದು ಸುಮಾರು 02 ಇಂಚು ಉದ್ದದ ಬಿಳಿ  ಗಡ್ಡ  ಮೀಸೆ ಬಿಟ್ಟಿದ್ದು ಈ ಮೃತನ ವಾರಸುದಾರರ ಪತ್ತೆಗೆ ಸಹಕರಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

ಮಾಹಿತಿಯನ್ನು ನೀಡಲು ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಫೋನ್‌ ನಂಬರ್‌  08182 -261414 ಅಥವಾ 9611761255 ಗಳನ್ನು ಸಂಪರ್ಕಿಸಲು ಕೋರಿದೆ.

Leave a Reply

Your email address will not be published. Required fields are marked *