ಇದು ವ್ಯಕ್ತಿ ಆಧಾರಿತ ಚುನಾವಣೆಯಲ್ಲ, ರಾಷ್ಟ್ರೀಯತೆಯ ಚುನಾವಣೆ – ಬಿ ವೈ ರಾಘವೇಂದ್ರ
ರಿಪ್ಪನ್‌ಪೇಟೆ;-ಈ ಭಾರಿಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ವ್ಯಕ್ತಿ ಆಧಾರಿತ ಚುನಾವಣೆಯಲ್ಲ ರಾಷ್ಟ್ರೀಯತೆಯ ಚುನಾವಣೆ ಎಂದು ಸಂಸದ ಹಾಗೂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ರಿಪ್ಪನ್‌ಪೇಟೆಯಲ್ಲಿ ಲೋಕಸಭಾ ಚುನಾವಣೆಯ ಬಿಜೆಪಿ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ ಕೇಂದ್ರದಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ತರಲಾಗಿರುವ ಅನುಧಾನದ ಕಾಮಗಾರಿಗಳ ಕುರಿತು ಮತದಾರರಿಗೆ ಮುಟ್ಟಿಸಬೇಕು ಹಾಗೂ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸುವುದರೊಂದಿಗೆ ಭಾಗ್ಯಲಕ್ಷಿö್ಮ ಬಾಂಡ್ ಹೀಗೆ ಹತ್ತು ಹಲವು ಜನಹಿತ ಕಾರ್ಯಗಳನ್ನು ಮಾಡುವುದರೊಂದಿಗೆ ಅಭಿವೃದ್ಧಿ ಪಡಿಸಲಾಗಿದ್ದು ಕಾರ್ಯಕರ್ತರು ಮತದಾರರಿಗೆ ಮನ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ನಮ್ಮ ಸರ್ಕಾರದ ಯೋಜನೆಯಾದ ಜಲಜೀವನ ಮಿಷನ್ ಕಾಮಗಾರಿಯನ್ನು ಈ ಹಿಂದೆ ಪ್ರಧಾನಮಂತ್ರಿ ಮೋದಿಜಿಯವರು ಶಿವಮೊಗ್ಗ ಬೇಟಿ ಸಂದರ್ಭದಲ್ಲಿ ಚಾಲನೆ ನೀಡಲಾದರೂ ಕೂಡಾ ಇಂದಿನ ರಾಜ್ಯ ಶಿಕ್ಷಣ ಸಚಿವ ಮಧುಬಂಗಾರಪ್ಪ ಮತ್ತು ಸಾಗರ ಶಾಸಕ ಗೋಪಾಲಕೃಷ್ಣರವರು ನಮ್ಮ ಕಾಂಗ್ರೆಸ್ ಸರ್ಕಾರದ ಮಂಜೂರು ಮಾಡಿರುವುದೆಂದು ಹೇಳಿ ಇತ್ತೀಚೆಗೆ ಹೊಸನಗರದಲ್ಲಿ ಪುನ: ಶಂಕುಸ್ಥಾಪನೆ ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂದಿನ ಶಾಸಕ ಹರತಾಳು ಹಾಲಪ್ಪ ಮತ್ತು ಗೃಹ ಸಚಿವ ಆರಗಜ್ಞಾನೇಂದ್ರರವರ ಆವಧಿಯಲ್ಲಿ ಚಕ್ರನಗರದಿಂದ ಹೊಸನಗರ ತಾಲ್ಲೂಕಿನ ವ್ಯಾಪ್ತಿಯ ನೂರಾರು ಹಳ್ಳಿಗಳಿಗೆ 417 ಕೋಟಿ ರೂ ವೆಚ್ಚದ ಜಲಜೀವನ್ ಮಿಷನ್ ಯೋಜನೆಯಡಿ ಶುದ್ದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಯಾರ ಅವಧಿಯಲ್ಲಿ ಮಾಡಿದ್ದು ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕೇಂದ್ರ ಸರ್ಕಾರದ ಅಯಿಷ್ಮಾನ್ ಯೋಜನೆಯಡಿ 2.51 ಲಕ್ಷ ಜನ ಫಲಾನುಭವಿಗಳಿಗೆ 260 ಕೋಟಿ ರೂ ಸೌಲಭ್ಯ ಪಡೆದಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಜನರಿಗೆ ಸುಳ್ಳು ಅಶ್ವಾಸನೆ ನೀಡಿ ಅಧಿಕಾರ ಗದ್ದುಗೆ ಹಿಡಿದಿದ್ದು ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆ.ಜಿ.ಆಕ್ಕಿಯನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದು ಸುಳ್ಳು ಹೇಳಿಕೊಂಡು ಮತದಾರರಿಗೆ ವಂಚಿಸುತ್ತಿರುವ ಕಾಂಗ್ರೆಸ್ ಸಾಧನೆ ಏನು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್,ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ, ತಾಲ್ಲೂಕ್ ಬಿಜೆಪಿ ಮುಖಂಡ ಎಂ.ಬಿ.ಮಂಜುನಾಥ,ಪಕ್ಷದ ಜಿಲ್ಲಾ ಮುಖಂಡರಾದ ಆರ್.ಟಿ.ಗೋಪಾಲ, ಬೆಳ್ಳೂರು ತಿಮ್ಮಪ್ಪ, ನಾಗರತ್ನ ದೇವರಾಜ್,ಪದ್ಮಸುರೇಶ್,ಜಿ.ಪಂ.ಮಾಜಿ ಸದಸ್ಯ ಎ.ಟಿ.ನಾಗರತ್,ಜಗದೀಶ್,ಎಂ.ಸುರೇಶ್‌ಸಿಂಗ್, ನಾಗೇಂದ್ರ ಕಲ್ಲೂರು,ಸುಂದರೇಶ್, ಸರಸ್ವತಿ, ನಿಂಗಪ್ಪ ಕಗ್ಗಲಿ,ಗಿರೀಶ್, ಕೆ.ಬಿ.ಹೂವಪ್ಪ,ಜಿ.ಡಿ.ಮಲ್ಲಿಕಾರ್ಜುನ,ನಾಗರಾಜಗೌಡ ಮಲ್ಲಾಪುರ, ಇನ್ನಿತರ ಹಲವರು ಹಾಜರಿದ್ದರು.