POSTMAN NEWS

ನೈಜ ಸುದ್ದಿ ನೇರ ಬಿತ್ತರ..

Konandur | ನಮ್ಮ ಅಭಿವೃದ್ಧಿ ಕಾರ್ಯಗಳು ಮತದಾರರ ಮನಮುಟ್ಟಿವೆ – ಬಿ ವೈ ರಾಘವೇಂದ್ರ

Konandur | ನಮ್ಮ ಅಭಿವೃದ್ಧಿ ಕಾರ್ಯಗಳು ಮತದಾರರ ಮನಮುಟ್ಟಿವೆ – ಬಿ ವೈ ರಾಘವೇಂದ್ರ


ರಿಪ್ಪನ್‌ಪೇಟೆ : ಮುಂಬರುವ ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಲಾಗಿದ್ದು ನಾನು ಮಾಡಿದ ಕಾರ್ಯಗಳು ಮತದಾರರ ಮನಮುಟ್ಟಿವೆ ಎಲ್ಲಾ ಸಮುದಾಯದವರು ಮತದಾರರು ನನಗೆ ಮತ್ತು ಕೇಂದ್ರದ ಮೋದಿಜಿಯವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆಂದು ಸಂಸದ ಶಿವಮೊಗ್ಗ ಲೋಕಸಭಾ ಬಿಜೆಪಿ ಆಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

ಸಮೀಪದ ಕೋಣಂದೂರಿನ ಶ್ರೀಶಿವಲಿಂಗೇಶ್ವರ ಬೃಹನ್ಮಠಕ್ಕೆ ಭೇಟಿ ನೀಡಿ ಶಿವಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಕೋಣಂದೂರು ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಅಶೀರ್ವಾದ ಪಡೆದು ಮಾತನಾಡಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಪುತ್ರನಿಗೆ ಹಾವೇರಿ ಕ್ಷೇತ್ರದಲ್ಲಿ ಟಿಕೇಟ್ ಸಿಗದೆ ಯಡಿಯೂರಪ್ಪ ಮತ್ತು ವಿಜೇಂದ್ರ ವಿರುದ್ದ ಸಲ್ಲದ ಮಾತುಗಳನ್ನಾಡುತ್ತಿರುವ ಈಶ್ವರಪ್ಪನವರು ಹಿರಿಯರು ಅವರ ಬಗ್ಗೆ ನಮಗೆ ಗೌರವವಿದೆ ಕೇಂದ್ರ ಸಮಿತಿಯಲ್ಲಿ ಅಯ್ಕೆ ಪ್ರಕ್ರಿಯೆ ನಡೆದಿದ್ದು ಇದರಲ್ಲಿ ನಮ್ಮ ತಂದೆ ಆಥವಾ ರಾಜ್ಯಧ್ಯಕ್ಷರ ಪಾತ್ರ ಏನು ಇಲ್ಲ ಎಂದು ಹೇಳಿ ಮುಂದಿನ ದಿನಗಳಲ್ಲಿ ಈಶ್ವರಪ್ಪನವರಿಗೆ ಎಲ್ಲವೂ ಆರ್ಥವಾಗುವುದೆಂದು ಹೇಳಿ ಪಶ್ಚಾತ್ತಾಪ ಪಡಬೇಕಾದ ದಿನಗಳು ದೂರವಿಲ್ಲ ಚುನಾವಣೆಯೇ ಉತ್ತರಿಸಲಿದೆ ಎಂದರು.


ಕಾಂಗ್ರೆಸ್ ಮತ್ತು ಪಕ್ಷೇತರ ಆಭ್ಯರ್ಥಿಗಳಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಸಮರ್ಥವಾಗಿ ಎದುರಿಸುವುದರೊಂದಿಗೆ ಕಳೆದ ಭಾರಿಗಿಂತ ಆಧಿಕ ಮತಗಳ ಅಂತರದಲ್ಲಿ ಗೆಲುವ ಬಗ್ಗೆ ವಾತವರಣ ಚನ್ನಾಗಿದೆ ಎಂಬುದಕ್ಕೆ ನಾನು ಹೋದಕಡೆಯಲ್ಲಿ ಸಣ್ಣ ಸಮುದಾಯದವರಿಂದ 
ಹಿಡಿದು ಇತರ ಎಲ್ಲ ಸಮುದಾಯದವರು ಹೆಚ್ಚು ಬೆಂಬಲಿಸುತ್ತಿದ್ದಾರೆಂದು ಹೇಳುವುದರೊಂದಿಗೆ ಈ ಭಾರಿ ಚುನಾವಣೆಯನ್ನು ಸವಾಲಾಗಿ ಸ್ವಿಕರಿಸಿ ಈಜಿ ದಂಡ ಸೇರಿಸುವ ಕಾರ್ಯದಲ್ಲಿ ಕಾರ್ಯಕರ್ತರ ತಂಡ ಸಿದ್ದವಾಗಿದೆ ಎಂದರು.

ಈ ಸಂದರ್ಭದಲ್ಲಿ  ಕೋಣಂದೂರು ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು,ಶಾಸಕ ಆರಗಜ್ಞಾನೇಂದ್ರ, ಕೆ.ಆರ್.ಪ್ರಕಾಶ್,ಶಂಕರಯ್ಯ ಶಾಸ್ತಿಗಳು ಹಾದಿಗಲ್ಲು, ಬಿಜೆಪಿ ಮುಖಂಡರಾದ ನವೀನ್,ಕುಕ್ಕೆಪ್ರಶಾಂತ, ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜಗೌಡ, ವೀರೇಶ್‌ ಅಲವಳ್ಳಿ, ಮಸರೂರುಶಾಂತವೀರಪ್ಪಗೌಡ,ಹೆಚ್.ಎಂ.ವರ್ತೇಶ್,ನಾಗಾಭೂಷಣಬೆಳಂದೂರು,ಸ್ವಾಮಿಗೌಡನೆವಟೂರು,ಕಮದೂರು ರಾಜಶೇಖರ, ಪರಮೇಶಕಮದೂರು,ಶಾಂತಕುಮಾರ ಜಂಬಳ್ಳಿ, ಅಭಿ ಬಿ.ಈ.ಕಿರಣ ಬೇಹಳ್ಳಿ,  ಶ್ರೀದೇವಿ ಕಿರಣ್, ರಾಜು ಕೋಣಂದೂರು,ಶಶಿಕುಮಾರ ಕೋಟೆಗದ್ದೆ,ರವಿ ಬಾಳೂರು,ಉಮೇಶ್ ಎಂ ಎಸ್ ದೊರೆಸ್ವಾಮಿ ಹುಳಗದ್ದ,ಗುರುಪಾದಪ್ಪ ಅಮೃತ ಇನ್ನಿತರ ಹಲವು ಬಿಜೆಪಿ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

    

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.