Ripponpete | ಲಂಚಕ್ಕೆ ಬೇಡಿಕೆಯಿಟ್ಟರಾ ತೂಕ ಮತ್ತು ಅಳತೆ ಮಾಪನ ಅಧಿಕಾರಿಗಳು – ಏನಿದು ಹೊಟೇಲ್ ಮಾಲೀಕನ ಆರೋಪ

Ripponpete | ಲಂಚಕ್ಕೆ ಬೇಡಿಕೆ – ತೂಕ ಮತ್ತು ಅಳತೆ ಮಾಪನ ನವೀಕರಣಗೊಳಿಸದೇ ಹಿಂದಿರುಗಿದ ಅಧಿಕಾರಿಗಳು..!!!


ರಿಪ್ಪನ್‌ಪೇಟೆ;-ವರ್ಷಕ್ಕೂಮ್ಮೆ ಸರ್ಕಾರ ತೂಕ ಮತ್ತು ಅಳತೆ ಮಾಪನಗಳನ್ನು ನವೀಕರಿಸಿ 250 ರೂ ಫೀ ಯನ್ನು ಗಣಕೀಕೃತ ರಶೀಧಿಯನ್ನು ನೀಡುತ್ತಾರೆ.ಇದರೊಂದಿಗೆ ಹೆಚ್ಚುವರಿಯಾಗಿ ಲಂಚದ ಹಣವನ್ನು  ತೂಕ ಮತ್ತು ಅಳತೆ ಮಾಪನಗಳನ್ನು ನವೀಕರಿಸಲು  ಕೊಡಬೇಕು ಇಲ್ಲವಾದರೆ ತಕಡಿಗೆ ಮೊಹರು ಮಾಡುವುದಿಲ್ಲ ಎಂದು ಕಾನೂನು ಮಾಪನಶಾಸ್ತ ಇಲಾಖೆಯ ಅಧಿಕಾರಿಗಳು ಹೇಳಿ ತಿರಸ್ಕರಿಸಿ ವಾಪಾಸ್ಸು ಹೋದ ಘಟನೆಯೊಂದು ನಡೆದಿದೆ.

ಶಿವಮೊಗ್ಗ ರಸ್ತೆಯ ಜಯಪ್ರಕಾಶ ಹೋಟಲ್ ಮತ್ತು ಜನರಲ್ ಸ್ಟೊರ‍್ಸ್ನಲ್ಲಿ ತೂಕ ಮತ್ತು ಅಳತೆ ಇತ್ಯಾದಿಗಳನ್ನು ಸತ್ಯಾಪನೆ ಮಾಡಿದ್ದೇನೆ ಮತ್ತು ಮೊಹರು ಮಾಡಿದ್ದೇನೆ ಎಂಬ ಬಗ್ಗೆ ಸರ್ಕಾರದ ಗಣಕೀಕೃತ  ರಶೀಧಿಯನ್ನು ನೀಡಿ ಉಳಿದಂತೆ ಹೆಚ್ಚುವರಿ ಲಂಚ ಹಣ ನೀಡಬೇಕು ಇಲ್ಲವಾದರೆ ನಿಮ್ಮ ತೂಕ ಮತ್ತು ಅಳತೆ ಮಾಪನವನ್ನು ನವೀಕರಣ ಮಾಡಲಾಗುವುದಿಲ್ಲ ಎಂದು ಹೇಳಿದರು. ನಾನು ಕೊಡುವುದಿಲ್ಲ ಎಂದು ಹೇಳಿದಾಗ ನಾವು ನವೀಕರಿಸುವುದಿಲ್ಲ ಎಂದು ಹೇಳಿ ವಾಪಾಸ್ಸು ಹೋದರು ಎಂದು ಜಯಪ್ರಕಾಶ ಹೋಟಲ್‌ನ ಡಿ.ಎಸ್.ಷಣ್ಮುಖಪ್ಪ ಆರೋಪಿಸಿದರು.

ಮಳೆ ಇಲ್ಲದೆ ಬೆಳೆಯು ಸರಿಯಾಗಿ ಕೈಗೆ ಸಿಗದೆ ರೈತರು ಪೇಟೆ ಪಟ್ಟಣಕ್ಕೆ ಬರದೇ ಇರುವುದರಿಂದ ವ್ಯಾಪಾರ ಸಹ ಕುಂಠಿತಗೊಂಡು ನಿತ್ಯ ಕುಟುಂಬದ ನಿರ್ವಹಣೆಯು ಕಷ್ಟಕರವಾಗಿರುವಾಗ ತೂಕ ಮತ್ತು ಅಳತೆ ಮಾಪನದವರು ತಕ್ಕಡಿ ನವೀಕರಣಕ್ಕಾಗಿ ಹೆಚ್ಚು ಹಣ ಕೇಳಿದರೆ ಕೂಡುವುದು ಹೇಗೆ ಸ್ವಾಮಿ ಎಂದು ಪರಿಪರಿಯಾಗಿ ಬೇಡಿದರೂ ಕೂಡಾ ಅಧಿಕಾರಿಗಳು ಹೆಚ್ಚುವರಿ ಲಂಚ ಹಣ ಕೊಡದಿದ್ದರೆ ತೂಕ ಮತ್ತು ಅಳತೆ ಸ್ಕೇಲ್‌ಗೆ ಮೊಹರು ಮಾಡುವುದಿಲ್ಲ ಎಂದು ಹೇಳಿ ವಾಪಾಸ್ಸು ಹೋದರೆಂದು ಜಯಪ್ರಕಾಶ ಹೋಟಲ್ ಮಾಲೀಕ ಷಣ್ಮುಖಪ್ಪ ಮಾಧ್ಯಮದವರ ಬಳಿ ತಮ್ಮ ನೋವು ತೊಡಿಕೊಂಡರು.

Leave a Reply

Your email address will not be published. Required fields are marked *