Belagavi | ಪತಿ ಹಾಗೂ ಮಗನನ್ನು ಬಿಟ್ಟು ವಿವಾಹಿತ ಪುರುಷನೊಂದಿಗೆ ಪರಾರಿಯಾದ ಮಹಿಳೆ..! ಮುಂದಾಗಿದ್ದೇನು ಗೊತ್ತಾ..?

ಪತಿ ಹಾಗೂ ಮಗನನ್ನು ಬಿಟ್ಟು ವಿವಾಹಿತ ಪುರುಷನೊಂದಿಗೆ ಪರಾರಿಯಾದ ಮಹಿಳೆ..! ಮುಂದಾಗಿದ್ದೇನು ಗೊತ್ತಾ..?

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜಿನರಾಳ ಗ್ರಾಮದ ವಿವಾಹಿತ ಮಹಿಳೆ ಹಾಗೂ ವಿವಾಹಿತ ಪುರುಷ ಓಡಿಹೋಗಿರುವ ಘಟನೆ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ರೇಣುಕಾ ವಾಲೀಕರ್ ಹಾಗೂ ಲಗಮ ವಾಲೀಕರ್ ಎಂಬ ವಿವಾಹಿತ ಜೋಡಿಯೊಂದು ಹೊಸ ಜೀವನ ಬಯಸಿ ತಮ್ಮ ಮನೆಯಿಂದ ಓಡಿಹೋಗಿದ್ದಾರೆ. ರೇಣುಕಾ ವಾಲೀಕಾರ್ ಎಂಬುವವರಿಗೆ 10 ವರ್ಷಗಳ ಹಿಂದೆ ಮದುವೆ ಆಗಿತ್ತು. ತಮ್ಮ ಮನೆಯ ಸಮೀಪದಲ್ಲಿದ್ದ ವಿವಾಹಿತ ಪುರುಷ ಲಗಮ ವಾಲೀಕಾರ್ ಎಂಬ ವ್ಯಕ್ತಿಯೊಂದಿಗೆ ಪ್ರೇಮಾಂಕುರವಾಗಿದೆ. ಬರುಬರುತ್ತಾ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಉಂಟಾಗಿದೆ.

ರೇಣುಕಾ ವಾಲಿಕರ್‌ ಓರ್ವ ಪುತ್ರನನ್ನು ಹೊಂದಿದ್ದಾಳೆ. ಇದ್ದಗ್ಯೂ ಸಹ ಗಂಡನೊಂದಿಗೆ ಸರಿಯಾಗಿ ಸಂಸಾರ ಮಾಡದೇ ಲಗಮ ವಾಲೀಕರ್ ಎಂಬುವವರ ಜತೆಗೆ ಕಳೆದೆರಡು ದಿನಗಳ ಹಿಂದೆ ಓಡಿಹೋಗಿದ್ದಾಳೆ.

ಈ ಪ್ರಕರಣದಿಂದ ರೊಚ್ಚಿಗೆದ್ದ ರೇಣುಕಾ ವಾಲೀಕರ್ ಗಂಡನ ಮನೆಯವರು ಲಗಮ ವಾಲೀಕಾರ್ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಮನೆಯ ಕಿಟಕಿಯ ಗಾಜುಗಳನ್ನು ಪುಡಿಪುಡಿಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಇನ್ನು ಈ ಘಟನೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ ಮಾಧ್ಯಮಗಳಿವೆ ಪ್ರತಿಕ್ರಿಯಿಸಿ, ಕಳೆದೆರಡು ದಿನಗಳ ಹಿಂದೆ ಬೆಳಗಾವಿ ಪೊಲೀಅ ತುರ್ತು ಸೇವೆಗಳ ಸಂಖ್ಯೆಗೆ ಕರೆ ಮಾಡಿ ಕೆಲವರು ಬಂದು ನಮ್ಮ ಮನೆಯಲ್ಲಿರುವ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದಾರೆ ಎಂದು ಕರೆ ಮಾಡಿದ್ರು. ಬಳಿಕ ಯಮಕನಮರಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕಿದ್ದ ಹಾನಿಯನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣವು ಮೇಲ್ನೋಟಕ್ಕೆ ವಿವಾಹಿತ ಪುರುಷ ಹಾಗೂ ಮಹಿಳೆಯರಿಬ್ಬರ ನಡುವೆ ಅನೈತಿಕ ಸಂಬಂಧ ಇರುವುದು ಕಂಡುಬಂದಿದೆ.

ವಿವಾಹಿತ ಮಹಿಳೆಯ ಗಂಡನ ಮನೆಯವರು ಓಡಿಹೋದ ಲಗಮನ ಮನೆಯ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಆದ್ರೆ ಇಲ್ಲಿಯವರೆಗೂ ವಿವಾಹಿತ ಮಹಿಳೆಯ ಗಂಡನ ಮನೆಯವರು ಯಾವುದೇ ರೀತಿಯ ದೂರು ಸಲ್ಲಿಸಿಲ್ಲ. ದೂರು ಸಲ್ಲಿಸಿದ ಕೂಡಲೇ ಕಾನೂನು ಚೌಕಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *