Headlines

Accident | ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಬಿದ್ದ ಬೃಹತ್​​ ಮರದ ಕೊಂಬೆ; ಮೂವರಿಗೆ ಗಾಯ

ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಬಿದ್ದ ಬೃಹತ್​​ ಮರದ ಕೊಂಬೆ; ಮೂವರಿಗೆ ಗಾಯ

ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಹೆದ್ದಾರಿ ಪಕ್ಕದ ಬೃಹತ್​​ ಮರದ ಕೊಂಬೆ ಬಿದ್ದ ಘಟನೆ  ಶಿವಮೊಗ್ಗ ಜಿಲ್ಲೆಯ ಗೊಂದಿ ಚಟ್ನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. 

ಬೈಕ್ ಓಡಿಸುತ್ತಿದ್ದ ಮಾವ ಮಹಮ್ಮದ್ ಶಫಿ, ಬೈಕ್ ಹಿಂಬದಿಯಲ್ಲಿದ್ದ ಸೊಸೆ ಮತ್ತು ಮೊಮ್ಮಗಳಿಗೆ ಗಾಯವಾಗಿದ್ದು, ಕೂಡಲೇ ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಅದೃಷ್ಟವಶಾತ್​ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಬೃಹತ್ ಮರದ ಕೊಂಬೆ ಬಿದ್ದ ಹಿನ್ನಲೆ ಬೈಕ್​ನಿಂದ ಜಾರಿ ಬಿದ್ದು ಮೂವರಿಗೆ ಗಂಭೀರ ಗಾಯವಾಗಿದೆ. ಈ ಕುರಿತು ಘಟನೆ ಪ್ರತ್ಯಕ್ಷದರ್ಶಿ ವಿಕಾಸ್ ಎಂಬುವವರು ಮಾತನಾಡಿ, ‘ಅವರು ಬೈಕ್​ ಮೇಲೆ ಬರುತ್ತಿದ್ದಾಗ ಏಕಾಏಕಿ ಮರ ಬಿದ್ದಿದೆ. ಕೂಡಲೇ ಗಾಯಗೊಂಡವರನ್ನು ಕಾರ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆಯಲ್ಲಿ ಮಗು ಮತ್ತು ತಾಯಿಗೆ ಗಂಭೀರ ಗಾಯ ಆಗಿದೆ. ಗ್ರಾಮಸ್ಥರು ಸೇರಿ ಗಾಯಾಳು ಕುಟುಂಬಕ್ಕೆ ಸಹಾಯ ಮಾಡಿದ್ದೇವೆ ಎಂದರು. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಗಾಯಾಳುಗಳನ್ನು ರಕ್ಷಣೆ ಮಾಡಿ ಚಿಕಿತ್ಸೆ ನೀಡಲಾಗಿದೆ.

About The Author

Leave a Reply

Your email address will not be published. Required fields are marked *