Headlines

ನಿಗೂಢ ಕೆಲಸಕ್ಕಾಗಿ 42 ಸಿಮ್‌ ಖರೀದಿ – ನಾಲ್ವರು ಯುವಕರ ಬಂಧನ

ನಿಗೂಢ ಕೆಲಸಕ್ಕಾಗಿ 42 ಸಿಮ್‌ ಖರೀದಿ – ನಾಲ್ವರು ಯುವಕರ ಬಂಧನ


ನಿಗೂಢ ಕೆಲಸಕ್ಕಾಗಿ ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಯುವಕರ ತಂಡವೊಂದು ಸೆರೆಯಾಗಿದೆ. ಅನುಮಾನಾಸ್ಪ ನಡೆ ಹಿನ್ನೆಲೆ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಗ್ಯಾಂಗ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಸಿಮ್​ಗಳ ಸಾಗಾಟ ಬಯಲಿಗೆ ಬಂದಿದೆ.

ಐವರಿದ್ದ ಯುವಕ ತಂಡ 42 ಅಕ್ರಮ ಸಿಮ್​ಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾ| ಧರ್ಮಸ್ಥಳ ಪೊಲೀಸರ ಬಲೆಗೆ ಬಿದ್ದಿದೆ . ಫೆಬ್ರವರಿ 1 ರಂದು ನೆರಿಯ ಗ್ರಾಮದಲ್ಲಿ ಯುವಕರನ್ನು ಬಂಧಿಸಿ ಸಿಮ್​ಗಳನ್ನು ಜಪ್ತಿ ಮಾಡಲಾಗಿದೆ. ರಮೀಝ್ (20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ (22) ಮೊಹಮ್ಮದ್ ಸಾಧಿಕ್ (27) ಬಂಧಿತ ಆರೋಪಿಯಾಗಿದ್ದು, ಪ್ರಕರಣದಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೂ ಸಿಲುಕಿದ್ದಾನೆ.

ಆರೋಪಿ ಅಕ್ಬರ್​ ಅಲಿ ದುಬೈನಲ್ಲಿ ಇದ್ದಾಗ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆ ಕೊಟ್ಟು ಸಿಮ್​ ಖರೀದಿ ಮಾಡಿದ್ದ. ಎರಡು ವರ್ಷಗಳ ಕಾಲ ದುಬೈನಲ್ಲಿದ್ದ ಈತ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದ. ವಿದೇಶದ ನಂಟು ಇರುವುದರಿಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ನಿಗೂಢ ಕೆಲಸಕ್ಕಾಗಿ 42 ಸಿಮ್‌ ಖರೀದಿಸಿದ್ದ ಯುವಕರ ತಂಡ ಸೆರೆ

Leave a Reply

Your email address will not be published. Required fields are marked *