w
Headlines
Home » ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯೇ ಅಂದರ್ ಬಾಹರ್!!! – ಹಲವರು ವಶಕ್ಕೆ..!!|crime news

ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯೇ ಅಂದರ್ ಬಾಹರ್!!! – ಹಲವರು ವಶಕ್ಕೆ..!!|crime news

ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯೇ ಅಂದರ್ ಬಾಹರ್!!! – ಹಲವರು ವಶಕ್ಕೆ..!!

ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಅದ್ದೂರಿ ಜಾತ್ರೆ ನಡೆಯುತ್ತಿದೆ. ನೂರಾರು ಕಡೆಗಳಿಂದ ಈ ಜಾತ್ರೆಗೆ ಸಾವಿರಾರು ಮಂದಿ ಬಂದಿದ್ದಾರೆ.

ಆದರೆ ಜಾತ್ರೆಯಲ್ಲಿ ಇಸ್ಪೀಟ್ ಅಂದರ್ ಬಾಹರ್ ಶುರುವಾಗಿದ್ದು ಜನರನ್ನು ಆಡಿಸುವ ಮೂಲಕ ಅಲ್ಪ ಸ್ವಲ್ಪ ಹಣವನ್ನು ಖಾಲಿ ಮಾಡಿಸಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಬೆಜ್ಜವಳ್ಳಿ ಜಾತ್ರೆಯಲ್ಲಿ ಕೆಲವು ವ್ಯಕ್ತಿಗಳು ಇಸ್ಪೀಟ್ ಆಟವನ್ನು ಬಹಿರಂಗವಾಗಿಯೇ ಆಡಿಸಿದ್ದಾರೆ.

ದೇವಸ್ಥಾನದ ಸಮೀಪವೇ ಅಕ್ರಮವಾಗಿ ಇಸ್ಪೀಟ್ ಆಟ ನಡೆದಿದ್ದು ಅಚ್ಚರಿ ಮೂಡಿಸಿದೆ. ಹಾಗೆಯೇ ಹಲವರ ಆಕ್ರೋಶಕ್ಕೂ ಕಾರಣವಾಗಿದೆ. ಮಾಳೂರು ಪೊಲೀಸರು ದಾಳಿ ನಡೆಸಿ ಅನೇಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.