ಪೋಕ್ಸೋ ಕೇಸ್ನಲ್ಲಿ ಆರೋಪಿಯೊಬ್ಬನಿಗೆ ಶಿವಮೊಗ್ಗ ಕೋರ್ಟ್ 20 ವರ್ಷ ಶಿಕ್ಷೆ ವಿಧಿಸಿದೆ.
2022 ನೇ ಸಾಲಿನಲ್ಲಿ ಭದ್ರಾವತಿ ನಗರದಲ್ಲಿ ನಡೆದ ಘಟನೆ ಇದು. ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿರುವಂತೆ 19 ವರ್ಷದ ಯುವಕನೊಬ್ಬ, 15 ವರ್ಷದ ಬಾಲಕಿಗೆ ಮದುವೆಯಾಗ್ತೀನಿ ಎಂದು ಪುಸಲಾಯಿಸಿದ್ದ. ಅಷ್ಟೆಅಲ್ಲದೆ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಈ ಸಂಬಂಧ ಬಾಲಕಿ ತಂದೆ ದೂರು ಕೊಟ್ಟಿದ್ದರು.
ಘಟನೆಯ ಬಗ್ಗೆ ದೂರು ಪಡೆದಿದ್ದ ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ತನಿಖಾಧಿಕಾರಿಗಳಾದ ರಾಘವೇಂದ್ರ ಖಾಂಡಿಕೆ, ಸಿಪಿಐ ಭದ್ರಾವತಿ ನಗರ ವೃತ್ತ ರವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು..
ಪ್ರಕರಣ The Addl District and Sessions Court, FTSC–II (POCSO) Shivamogga ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರುಗಳಾದ ಹರಿಪ್ರಸಾದ್ ಮತ್ತು ಶ್ರೀಧರ್ ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಈ ಸಂಬಂಧ ಇದೀಗ ಆರೋಪ ದೃಢಪಟ್ಟು ತೀರ್ಪು ಹೊರಬಿದ್ದಿದ್ದು ನ್ಯಾಯಾಧೀಶರಾದ ಮೋಹನ್ ಜೆ.ಎಸ್. ರವರು ದಿನಾಂಕ: 11-01-2024 ರಂದು ಆರೋಪಿತನಿಗೆ ಶಿಕ್ಷೆ ವಿಧಿಸಿದ್ದಾರೆ..
20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 1,10,000 /- ರೂ ದಂಡ, ದಂಡಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದು ಹಾಗೂ ನೊಂದ ಬಾಲಕಿಗೆ ದಂಡದ ಮೊತ್ತದಲ್ಲಿ 1,00,000/- ರೂ ಗಳನ್ನು ಮತ್ತು ಪರಿಹಾರವಾಗಿ 3,00,000/- ರೂಗಳನ್ನು ನೀಡಲು ಆದೇಶ ನೀಡಿರುತ್ತಾರೆ