ಸಾವಿರ ಭಾರಿ ಸೋಲುಂಡರು ಚಿಂತಿಸದೇ ಛಲಬಿಡದೆ ಹೋರಾಟದಿಂದ ಯಶಸ್ಸು ಸಾಧ್ಯ – ನಿರ್ಭಯಾನಂದ ಸರಸ್ವತಿ ಸ್ವಾಮೀಜಿ
ರಿಪ್ಪನ್‌ಪೇಟೆ : ಭಾರತದಲ್ಲಿ ಪ್ರತಿಭಾನ್ವಿತ ಸಾಧಕರಿದ್ದಾರೆ. ಆದರೆ ಅವರಿಗೆ ಪ್ರೋತ್ಸಾಹ-ಅವಕಾಶಗಳಿಲ್ಲ,ನಮ್ಮಲ್ಲಿ ಎಷ್ಟೇ ಸಂಶೋಧನೆಗಳಾದರೂ ಅವು ಸದ್ಬಳಕೆಯಾಗಿದ್ದು ವಿದೇಶಗಳಲ್ಲಿ ಹೀಗಾಗಿ ಆ ದೇಶಗಳು ಮುಂದುವರಿದಿವೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು
ಪಟ್ಟಣದ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಜ್ಞಾನ ಮತ್ತು ತಾಂತ್ರಿಕತೆ ಇಂದು ಬಹಳಷ್ಟು ವಿಸ್ತಾರಗೊಂಡಿದೆ. ಅದ್ಭುತ ಸಾಧನೆಗಳಾಗಿವೆ. ವಿಜ್ಞಾನವನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಏಕಾಗ್ರತೆಯಿಂದ ಅಧ್ಯಯನ ಮಾಡುವ ಮೂಲಕ ಮುಂದೊಂದು ದಿನ ದೊಡ್ಡ ವಿಜ್ಞಾನಿಯಾಗಿ ಹೊರಹೊಮ್ಮಬೇಕು ಎಂದರು.
ಯಾವುದೇ ಒಳ್ಳೆಯ ಕಾರ್ಯ ಮಾಡುವಾಗ ಸಾಕಷ್ಟು ಸಂಕಷ್ಟಗಳು ಎದುರಾಗಿ ಸೋಲುವಂತಾಗಿದೆ ಅದರೆ ನಾವು ಅದನ್ನು ಒಂದಲ್ಲಾ ಒಂದು ಭಾರಿ ನಮಗೆ ಜಯ ದೊರುಕುವುದರಲ್ಲಿ ಯಾವುದೇ ಸಂದೇಹವಿಲ್ಲ,ಏಕಾಗ್ರತೆಯಿಂದ ಇದ್ದರೆ ಏನು ಬೇಕಾದರು ಸಾಧನೆ ಮಾಡಬಹುದು ಎಂಬುದನ್ನು ಸ್ವಾಮಿ ವಿವೇಕಾನಂದರು ತಿಳಿಸಿಕೊಟ್ಟಿದ್ದಾರೆ.ಅವರ ತತ್ವಾಧರ್ಶಗಳನ್ನು ನಮ್ಮ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಆಳವಡಿಸಿಕೊಂಡಾಗ ಸೋಲು ಎಂಬುದು ಬರುವುದಿಲ್ಲ ಎಂದರು.
ಬೆಂಗಳೂರು ಯಲಹಂಕ ರಾಮಕೃಷ್ಣ ವೇದಾಂತ ಆಶ್ರಮದ ಆಭಯಾನಂದಜಿ ಮಹಾರಾಜ್,ಹೊಸನಗರ ತಾಲ್ಲೂಕಿನ ಸುಳಗೋಡು ಶ್ರೀರಾಮಕೃಷ್ಣ ಯೋಗಪೀಠದ ಶ್ರೀಸ್ವಾಮಿ ಪ್ರಕಾಶನಂದಜೀ ಮಹಾರಾಜ್ ನೇತೃತ್ವ ವಹಿಸಿದ್ದರು.
ಶ್ರೀಶಾರದ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.
ಕುಮಾರಿ ನವ್ಯ ಪ್ರಾರ್ಥಿಸಿದರು, ಶಾರದ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಆಧ್ಯಕ್ಷ ಡಿ.ಎಂ.ದೇವರಾಜ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗುರುರಾಜ ವಂದಿಸಿದರು.