
ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಕಾಣೆಯಾಗಿರುವ ಘಟನೆ ನಡೆದಿದೆ.
ಪಟ್ಟಣದ ಮದೀನ ಕಾಲೋನಿ ನಿವಾಸಿ ಮೀನು ವ್ಯಾಪಾರದಲ್ಲಿ ತೊಡಗಿದ್ದ ಬರ್ಕತ್ ಅಲಿ ಬಿನ್ ಹಾದಿ ಬಾಷಾ ಅವರು ನವೆಂಬರ್ 13, 2025 ರಂದು ಮನೆಯಿಂದ ಹೋದವರು ಮನೆಗೆ ವಾಪಾಸಾಗಿಲ್ಲ ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಮಾನ್ಯವಾಗಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಬರ್ಕತ್ ಅಲಿ ಅವರು ಆ ದಿನದಿಂದ ಯಾವುದೇ ರೀತಿಯ ಸಂಪರ್ಕಕ್ಕೂ ಸಿಗದ ಹಿನ್ನೆಲೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಕಾಣೆಯಾಗಿರುವ ವ್ಯಕ್ತಿಯ ಕುರಿತು ಸುಳಿವಿಗಾಗಿ ಪೊಲೀಸರು ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ಸಾರ್ವಜನಿಕರ ಸಹಕಾರಕ್ಕಾಗಿ ಮನವಿ ಮಾಡಿದ್ದಾರೆ.
ಬರ್ಕತ್ ಅಲಿ ಅವರ ಬಗ್ಗೆ ಯಾವುದೇ ಮಾಹಿತಿಗಳು—ಅವರನ್ನು ಯಾವುದಾದರೂ ಕಡೆ ಕಂಡಿದ್ದರೆ, ಅವರಿರುವ ಸಾಧ್ಯತೆಯ ಸ್ಥಳಗಳ ಬಗ್ಗೆ ತಿಳಿದಿದ್ದರೆ—ತಕ್ಷಣವೇ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪಟ್ಟಣದ PSI ರಾಜುರೆಡ್ಡಿ ತಿಳಿಸಿದ್ದಾರೆ.
ಹುಡುಕಾಟ ಕಾರ್ಯಕ್ಕೆ ಸಾರ್ವಜನಿಕರಿಂದ ಯಾವುದೇ ಸುಳಿವೂ ನೆರವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪರ್ಕ ಸಂಖ್ಯೆ: 8277983045 / 9480803365




