Headlines

ಸಮಾಜಮುಖಿ ಕಾರ್ಯಗಳಿಂದ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ – ಕೆ.ಪಾಲಾಕ್ಷ

ಸಮಾಜಮುಖಿ ಕಾರ್ಯಗಳಿಂದ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ – ಕೆ.ಪಾಲಾಕ್ಷ

ರಿಪ್ಪನ್ ಪೇಟೆ: ಸಮಾಜಮುಖಿ ಕಾರ್ಯಗಳ ಮಾಡುವುದರ ಮೂಲಕ ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದು ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಜೀವನ ಸಾಗಿಸುತ್ತಿರುವ ಪ್ರತಿಯೊಬ್ಬರು ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ, ಜೀವನದ ಒತ್ತಡವನ್ನು ತೊಡೆದು ಹಾಕಲು ಏಕೈಕ ಮಾರ್ಗ ಸಮಾಜ ಸೇವೆ ಎಂದು ರೋಟರಿ ಜಿಲ್ಲಾ 31 82ರ ಜಿಲ್ಲಾ ಗವರ್ನರ್ ಕೆ ಪಾಲಕ್ಷ ಹೇಳಿದರು.

ಪಟ್ಟಣದ ರೋಟರಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸೇವೆಯ ಮನೋಭಾವ ಹೊಂದಿರುವವರಿಗೆ ಮಾತ್ರ ನೆಮ್ಮದಿಯ ಬದುಕನ್ನು ಕಾಣಬಹುದು ಸಮಾಜವು ಸೇವೆಯನ್ನು ಗುರುತಿಸುತ್ತದೆ ಹಾಗೆಯೇ ಸಮಾಜ ಸೇವೆಯನ್ನು ಮಾಡುವ ವ್ಯಕ್ತಿಗಳಿಗೆ ಸಮಾಜ ಸೇವೆಯು ನೆಮ್ಮದಿಯನ್ನು ನೀಡುತ್ತದೆ, ವಿಶ್ವದ 220 ರಾಷ್ಟ್ರಗಳಲ್ಲಿ 11 ಲಕ್ಷಕ್ಕೂ ಅಧಿಕ ರೋಟರಿ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಆರೋಗ್ಯ ಶಿಕ್ಷಣ ಸೇರಿದಂತೆ ಇನ್ನಿತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದರ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ರೋಟರಿ ಸಂಸ್ಥೆಯ ಮೂಲ ಉದ್ದೇಶ ಆರೋಗ್ಯದ ರಕ್ಷಣೆ ಮತ್ತು ಸಮಾಜ ಸೇವೆಯಾಗಿದೆ ಜಗತ್ತಿನಲ್ಲಿ ಪೋಲಿಯೋ ನಿರ್ಮೂಲನಕ್ಕೆ  ಅತ್ಯಧಿಕ ಆರ್ಥಿಕ ನೆರವು  ನೀಡುವುದರ ಮೂಲಕ   ತನ್ನ ಕೊಡುಗೆಯನ್ನು ನೀಡಿದೆ,   ಮಲೆನಾಡಿನ ಪ್ರಕೃತಿದತ್ತ ನಿಸರ್ಗದ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬರಲ್ಲಿ  ಸೇವಾ ಮನೋಭಾವನೆ ರಕ್ತಗತವಾಗಿ ಬಂದಿದೆ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಆಸಕ್ತಿ ಇರುವ ಪ್ರತಿಯೊಬ್ಬರಿಗೂ ರೋಟರಿ ಸಂಸ್ಥೆಯ ಸದಸ್ಯರಾಗಲು ಅವಕಾಶವಿದೆ ಎಂದರು.

ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಅಸಿಸ್ಟೆಂಟ್ ಗವರ್ನರ್ ಎಂ.ಬಿ ಲಕ್ಷ್ಮಣಗೌಡ ಮಾತನಾಡಿ ಪಟ್ಟಣದಲ್ಲಿ ರೋಟರಿ ಸಂಸ್ಥೆ ಸ್ಥಾಪನೆಯಾಗಿ 15 ವರ್ಷಗಳು  ಸಂದಿದೆ, ಆರೋಗ್ಯ, ಶಿಕ್ಷಣ, ಕೃಷಿ, ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ನೀಡುವುದರ ಮೂಲಕ  ನಮ್ಮ ರೋಟರಿ ಸಂಸ್ಥೆ ಸಮಾಜ ಸೇವಾ ಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ, ಆರೋಗ್ಯ ತಪಾಸಣಾ ಶಿಬಿರ, ನೇತ್ರ ಚಿಕಿತ್ಸೆ ಮತ್ತು ಕಣ್ಣಿನ ತಪಾಸಣಾ ಶಿಬಿರ ರಕ್ತದಾನ ಶಿಬಿರ, ಶಾಲಾ ಕಾಲೇಜು ಮಕ್ಕಳಿಗೆ ಕೌಶಲ್ಯ ತರಬೇತಿ ಶಿಬಿರ,ನೀಟ್ ಹಾಗೂ ಸಿಇಟಿ ಪರೀಕ್ಷೆಗಳ ಮಾಹಿತಿ ಶಿಬಿರ,  ಸಂಚಾರ ಸುರಕ್ಷತಾ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಉಚಿತ ಶೈಕ್ಷಣಿಕ ಪರಿಕರಗಳ ವಿತರಣೆ,ರಕ್ತದಾನ ಶಿಬಿರ, ಕೃಷಿ ಕಾರ್ಮಿಕರಿಗೆ ಉಚಿತ ಕೃಷಿ ಪರಿಕರಗಳ ವಿತರಣೆ, ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳ ವಿತರಣೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆಗೈದ ನಾಗರಿಕರಿಗೆ ಪುರಸ್ಕಾರ, ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಮತ್ತು ಅಂತಿಮ ಪದವಿ ತರಗತಿಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದೊಂದಿಗೆ ನಗದು ವಿತರಣೆ ಸೇರಿದಂತೆ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಕೃಷ್ಣರಾಜ ಎ ಎಂ ವಹಿಸಿದ್ದರು.

ರೋಟರಿ ವಲಯ 11ರ ವಲಯ ಸೇನೆ ಭರತ್ ಎಂ. ಕೂಡ್ಲು  . ಕಾರ್ಯದರ್ಶಿ ರಾಧಾಕೃಷ್ಣ ಜೆ. ರೋಟರಿ ಜಿಲ್ಲಾ 31 82ರ ಪ್ರಥಮ ಮಹಿಳೆ ಸುರೇಖಾ ಪಾಲಾಕ್ಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕೃಷಿ ಕ್ಷೇತ್ರದಲ್ಲಿ ಸಾಧನೆಗೆ ಕೇಂದ್ರ ಸರ್ಕಾರದ ರಾಷ್ಟ್ರಮಟ್ಟದ ಕೃಷಿ ಪ್ರಶಸ್ತಿ ಪಡೆದ ರಿಪ್ಪನ್ ಪೇಟೆಯ ಅನಂತಮೂರ್ತಿ ಜವಳಿ, ಸಹಕಾರಿ ಕ್ಷೇತ್ರದ ಸೇವೆಗೆ ರಾಜ್ಯಮಟ್ಟದ ಸೇವಾ ಸಹಕಾರಿ ಪ್ರಶಸ್ತಿ ಪಡೆದ ಎಂ ಪರಮೇಶ್, ಸಮಾಜ ಸೇವೆಗಾಗಿ ಸುನಂದ,ಗಿನ್ನಿಸ್ ದಾಖಲೆ ಮಾಡಿದ ಕವನಶ್ರೀ , ಶಿಕ್ಷಣ ಕ್ಷೇತ್ರದ ಸಾಧನೆಗೆ ಐಶ್ವರ್ಯ ಡಾಕಪ್ಪ ಕ್ರೀಡೆ ಕ್ಷೇತ್ರದ ಸಾಧನೆಗೆ ಪಂಚಮಿಯ ರವಿಶಂಕರ್ ರವರಿಗೆ ರಿಪ್ಪನ್ ಪೇಟೆ ರೋಟರಿ ಕ್ಲಬ್ ವತಿಯಿಂದ ಜಿಲ್ಲಾ ಗವರ್ನರ್ ಕೆ ಪಾ ಲಕ್ಷ ಸನ್ಮಾನಿಸಿ ಗೌರವಿಸಿದರು.

ಸವಿತಾ ರಾಧಾಕೃಷ್ಣ ಮತ್ತು ಅಮಿತ್ ಬಲ್ಲಾಳ್ ಪ್ರಾರ್ಥಿಸಿದರು. ಕಾರ್ಯದರ್ಶಿ ರವೀಂದ್ರ ಬಲ್ಲಾಳ್ ವರದಿ ವಾಚನ ಮಾಡಿ,ಗಣೇಶ್ ಆರ್, ಸಬಾಸ್ಟಿನ್, ಎಂಬಿ ಮಂಜುನಾಥ್ ನಿರೂಪಿಸಿ ರಾಧಾಕೃಷ್ಣ ಜೆ ವಂದಿಸಿದರು.

Exit mobile version