
ರಿಪ್ಪನ್ ಪೇಟೆ : 72ನೇ ಅಖಿಲ ಭಾರತ ಸಹಕಾರ ಸಪ್ತಾಹ – ಸಮಾರೋಪ ಸಮಾರಂಭ
ಸಹಕಾರ ಸಂಘಗಳು ಗ್ರಾಮೀಣ ಜನರಿಗೆ ಉಪಯುಕ್ತವಾಗಿದೆ: ಆರ್. ಎಂ. ಮಂಜುನಾಥ್ ಗೌಡ
ರಿಪ್ಪನ್ ಪೇಟೆ : ಪಟ್ಟಣದ ವಿಶ್ವಮಾನವ ಒಕ್ಕಲಿಗರ ಸಭಾಭವನದಲ್ಲಿ ನವೆಂಬರ್ 20ರಂದು 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘ ಸಭಾಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮವನ್ನು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಆರ್. ಎಂ. ಮಂಜುನಾಥ್ ಗೌಡ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಮಟ್ಟದಿಂದ ರಾಷ್ಟ್ರ ಮಟ್ಟದ ವರೆಗೂ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಸಹಕಾರ ವ್ಯವಸ್ಥೆ ಬಹುಮುಖ ವಲಯವಾಗಿದ್ದು. ಜನ ಸಾಮಾನ್ಯ ರು ಈ ವಲಯದ ಮೇಲೆ ಅವಲಂಬಿತ ರಾಗಿದ್ದಾರೆ, ಸಹಕಾರ ಸಂಘಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಉಪಯುಕ್ತ ಸೇವೆಯನ್ನು ನೀಡುವ ಮೂಲಕ ಜನರ ಸೇವೆಯಲ್ಲಿ ನಿರತವಾಗಿದೆ. ಸದಸ್ಯರ ಮತ್ತು ರೈತರ ಆರ್ಥಿಕ ವ್ಯವಸ್ಥೆ ಜೀವನಾಡಿಯಾಗಿ ಕೆಲಸ ನಿರ್ವಹಿಸುವ ಮುಖಾಂತರ ರೈತರ ಕಾಮಧೇನು ಕಲ್ಪವೃಕ್ಷವಾಗಿದೆ ಎಂದರು.
ಶಿಮೂಲ್ ಅಧ್ಯಕ್ಷ ಹೆಚ್. ಎನ್. ವಿದ್ಯಾಧರ ‘ಸಹಕಾರ ಸಪ್ತಾಹ’ದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಐಸಿಎಮ್ ಪ್ರಭಾರ ಉಪನ್ಯಾಸಕಿ ಟಿ. ಸರಸ್ವತಿ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಡಾ. ಆರ್.ಎಂ. ಮಂಜುನಾಥ್ ಗೌಡ, ಹಾಗೂ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಎಂ.ಎಂ. ಪರಮೇಶ್, ಎಸ್.ಕೆ. ಮರಿಯಪ್ಪ ಮತ್ತು ಕೆ.ಎನ್. ರಾಮಕೃಷ್ಣರ ಸನ್ಮಾನ ಕಾರ್ಯಕ್ರಮ ಜರಗಿತು.
ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ (ಶಿಮೂಲ್), ಸಹಕಾರ ಇಲಾಖೆ ಹಾಗೂ ಹೊಸನಗರ ತಾಲೂಕಿನ ಎಲ್ಲಾ ಸಹಕಾರ ಸಂಘ-ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ ಸಮಾರೋಪ ಸಮಾರಂಭ ಅದ್ದೂರಿಯಾಗಿ ನೆರವೇರಿತು
ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕರುಗಳಾದ — ಎಸ್.ಕೆ. ಮರಿಯಪ್ಪ, ಎಂ.ಎಂ. ಪರಮೇಶ್, ಕೆ.ಎನ್. ರಾಮಕೃಷ್ಣ, ಜಿ.ಎನ್. ಸುಧೀರ್, ಕೃಷ್ಣಮೂರ್ತಿ, ಕೆ.ವಿ. ಧರ್ಮೇಂದ್ರ, ಎಚ್. ಮಧುಸೂದನ್, ಎಸ್. ನಾವುಡ, ಹೆಚ್.ಬಿ. ಕಲ್ಯಾಣಪ್ಪ ಗೌಡ, ಎಂ.ವಿ. ಜಯರಾಮ್, ದಿನೇಶ್ ಬರದವಳ್ಳಿ, ಶ್ವೇತಾ ಬಂಡಿ, ನರಸಿಂಹ ಗೌಡ, ಪ್ರಮೀಳಾ ಲಕ್ಷ್ಮಣ ಗೌಡ, ಸುಮಾ ಸುಬ್ರಮಣ್ಯ, ಹೆಚ್. ನಾಗರಾಜ್, ಎಚ್.ಪಿ. ನಂಜುಂಡಪ್ಪ, ಜಯಶೀಲಪ್ಪ ಗೌಡ, ಕೆ. ವಿ. ಕೃಷ್ಣಮೂರ್ತಿ ಸೇರಿದಂತೆ ಅನೇಕ ಸಹಕಾರ ಸಂಘಗಳ ಅಧ್ಯಕ್ಷರು-ನಿರ್ದೇಶಕರು-ಸದಸ್ಯರು ಕಾರ್ಯಕ್ರಮ ದಲ್ಲಿ ಹಾಜರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್ ವಹಿಸಿದ್ದರು.




