Headlines

RIPPONPETE | ಅಡಿಕೆ ತೋಟದಲ್ಲಿ ಯುವಕನ ಅಕಾಲಿಕ ಸಾವು – ಸಹಜ ಸಾವು ಎಂದು ಪ್ರಕರಣ ದಾಖಲು

RIPPONPETE | ಅಡಿಕೆ ತೋಟದಲ್ಲಿ ಯುವಕನ ಅಕಾಲಿಕ ಸಾವು – ಸಹಜ ಸಾವು ಎಂದು ಪ್ರಕರಣ ದಾಖಲು

ರಿಪ್ಪನ್ ಪೇಟೆ : ಇಲ್ಲಿನ ಗವಟೂರು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಅಡಿಕೆ ತೋಟದಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಜ ಸಾವು ಎಂದು ದೂರು ದಾಖಲಾಗಿದೆ.

ಪಟ್ಟಣದ ದೊಡ್ಡಿನಕೊಪ್ಪ ನಿವಾಸಿ ಮಂಜುನಾಥ್ (37) ಮೃತಪಟ್ಟ ದುರ್ಧೈವಿಯಾಗಿದ್ದು , ಅಡಿಕೆ ತೋಟದಲ್ಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದ ಘಟನೆ ನಡೆದಿತ್ತು ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆಕಸ್ಮಿಕ ಸಹಜ ಸಾವು ಎಂಬ ಅಂಶ ಪತ್ತೆಯಾಗಿದ್ದು ಅದರ ಆಧಾರದಡಿಯಲ್ಲಿ ಎಫ್ ಐ ಆರ್ ದಾಖಾಲಾಗಿದೆ.

ದೂರಿನಲ್ಲೇನಿದೆ..!!??

ಮೃತ ಮಂಜುನಾಥ್ ಗವಟೂರು ಗ್ರಾಮದ ಜಗದೀಶ್ ಎಂಬುವವರ ತೋಟಕ್ಕೆ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ ಸಮಯದಲ್ಲಿ ಮನೆಗೆ ಕರೆ ಮಾಡಿ ಊಟ ಮಾಡಿದ್ದೇನೆ ಯಾಕೋ ಕೆಲಸ ಮಾಡಲು ಆಗುತ್ತಿಲ್ಲ ಮನೆಗೆ ಬರುತ್ತೇನೆ ಎಂದು ಹೇಳಿದ್ದಾನೆ.ಆ ನಂತರ ಮಧ್ಯಾಹ್ನ 3.45 ಕ್ಕೆ ಮಂಜುನಾಥ್ ಪೋನ್ ನಿಂದ ಪತ್ನಿಗೆ ಕರೆ ಮಾಡಿ ನಿಮ್ಮ ಯಜಮಾನರು ಕಾಲು ಜಾರಿ ಬಿದ್ದಿದ್ದಾರೆ ಎಂದು ತಿಳಿಸಿದ್ದು ಕೂಡಲೇ ಆಸ್ಪತ್ರೆಗೆ ತೆರಳಿ ನೋಡಿದಾಗ ಮಾತನಾಡುತ್ತಿರಲಿಲ್ಲ ಕೂಡಲೇ ಜೊತೆಯಲ್ಲಿದ್ದವರನ್ನು ಕೇಳಿದಾಗ ಮಂಜುನಾಥ್ ಊಟ ಮುಗಿಸಿ ಅಡಿಕೆ ಮರದ ಕೆಳಗೆ ಮಲಗಿದ್ದು ನಾವೆಲ್ಲಾ ಅಡಿಕೆ ಕೊನೆ ಕೊಯ್ಯುತಿದ್ದು ಆ ನಂತರ ಮಂಜುನಾಥ್ ಎದ್ದು ಕೆಲಸದ ಕಡೆಗೆ ಬರುವಾಗ ಅಡಿಕೆ ಖಾನೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಯ ಕೆಸರಿನಲ್ಲಿ ಬಿದ್ದಿದ್ದು ಬಾಯಲ್ಲಿ ನೊರೆ ಬಂದಿತ್ತು ಕೂಡಲೇ ಆಸ್ಪತ್ರೆಗೆ ಕರೆತಂದೆವು ಎಂದಿದ್ದಾರೆ.ಅಡಿಕೆ ತೋಟದ ಕಾಲುವೆಯ ಕೆಸರಿಗೆ ಬಿದ್ದು ಉಸಿರಾಡಲು ಆಗದೇ ಮೃತಪಟ್ಟಿದ್ದಾರೆ ಬೇರೆ ಯಾವುದೇ ಕಾರಣವಿರುವುದಿಲ್ಲ ಹಾಗೂ ಯಾರ ಮೇಲೆಯೂ ಅನುಮಾನವಿರುವುದಿಲ್ಲ ಎಂದು ಮೃತ ಮಂಜುನಾಥ್ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಜುನಾಥ್ ಮರಣೋತ್ತರ ಪರೀಕ್ಷೆ ನಡೆಯಿತು.

Exit mobile version