POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹೊಸನಗರ : ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸುವಂತೆ ಎಬಿವಿಪಿ ಕಾರ್ಯಕರ್ತರ ಆಗ್ರಹ|abvp

ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸುವಂತೆ ಎಬಿವಿಪಿ ಕಾರ್ಯಕರ್ತರ ಆಗ್ರಹ
ಹೊಸನಗರ : ಹಿಂದುಳಿದ ವರ್ಗಗಳ ಇಲಾಖೆ ಕೃಷಿ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಆಯುಷ್ಯ ಇಲಾಖೆ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಅಡಿಯಲ್ಲಿ ನೀಡುತ್ತಿರುವ ವಿದ್ಯಾರ್ಥಿವೇತನಗಳನ್ನು ರಾಜ್ಯ ಸರ್ಕಾರ ಈಗ ತಡೆಹಿಡಿದಿದ್ದು ಈ ಪ್ರಕ್ರಿಯೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಿದ್ದ ಕಾರಣ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಹೊಸನಗರ ಘಟಕದವರು ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಿಂದ ತಾಲೂಕು ಕಚೇರಿವರೆಗೆ ಜಾಥ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಸರ್ಕಾರದ ಗಮನ ಸೆಳೆಯುವಂತೆ ಕೋರಿದರು.

ರಾಜ್ಯ ಸರ್ಕಾರ 22 23ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ ನೀಡದೆ ಈ ಹಣವನ್ನು ಬೇರೆ ಯೋಜನೆಗಳಿಗೆ ಬಳಸುತ್ತಿರುವುದು ಖಂಡನಾರ್ಹವಾಗಿದೆ.

ಕುಟುಂಬದ ಆರ್ಥಿಕ ಸಮಸ್ಯೆಗಳಿಂದಾಗಿ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕು ಗೊಳಿಸುತ್ತಿದ್ದು  ಇದನ್ನು ಕಂಡ ಸರ್ಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ನಾಂದಿ ಹಾಡಿದ್ದು ಈಗ ವಿದ್ಯಾರ್ಥಿ ವೇತನವನ್ನು ತಡೆಹಿಡಿಯುವ ಮೂಲಕ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಕಾರ್ಯಕರ್ತರ ಅಳಲು ಆಗಿದೆ.

ತಾಲೂಕ ಕಚೇರಿಯವರೆಗೂ ಜಾಥಾ ತೆರಳಿದ ಎಬಿವಿಪಿ ಕಾರ್ಯಕರ್ತರು ತಹಶೀಲ್ದಾರ್ ರಾಕೇಶ್ ಫ್ಯಾನ್ಸಿಸ್ ಬ್ರಿಟ್ಟೋ ರವರಿಗೆ ಮನವಿ ಸಲ್ಲಿಸಿದರು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಹೊಸನಗರ ಘಟಕದ ನಗರ ಕಾರ್ಯದರ್ಶಿ ಕೆ ಕೆ ಮನೋಜ್, ಕಾರ್ಯಕರ್ತರಾದ ಸುದೀಪ್, ಅಶ್ವಲ್, ಯಶವಂತ್, ದೀಕ್ಷಾ, ಸೀಮಾ, ರಶ್ಮಿತಾ, ಚಿನ್ಮಯ್, ಅರಾಜ್, ನೂತನ್, ನಂದನ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.