ಶಿವಮೊಗ್ಗ : ವಿಜಯದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಮೊಗ್ಗ ನಗರ ಶಾಖೆ ವತಿಯಿಂದ ಭಾನುವಾರ ಗಣವೇಷಧಾರಿ ಸ್ವಯಂಸೇವಕರಿಂದ ಪಥ ಸಂಚಲನ ನಡೆಯಿತು.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಹೊರಟ ಪಥ ಸಂಚಲನವು ರಾಮಣ್ಣ ಶ್ರೇಷ್ಠಿ ಪಾರ್ಕ್ ವೃತ್ತ, ಬಸವೇಶ್ವರ ದೇವಸ್ಥಾನ, ಸಿದ್ದಯ್ಯ ರಸ್ತೆ, ಎಂ. ಕೆ.ಕೆ ರಸ್ತೆ, ಸಾವರ್ಕರ್ ಸರ್ಕಲ್, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ಅಶೋಕ ರಸ್ತೆಯ ಮುಖಾಂತರ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ ತಲುಪಿತು.
ಪಥಸಂಚಲನದ ನೇತೃತ್ವ ಜಿಲ್ಲಾ ಸಂಘಚಾಲಕರಾದ ಬಿ.ಎ. ರಂಗನಾಥ್, ನಗರ ಸಂಘ ಚಾಲಕ ಲೋಕೇಶ್ವರ ಕಾಳೆ ವಹಿಸಿದ್ದರು.
ಪಥಸಂಚಲನದಲ್ಲಿ ಸಂಸದ ಬಿ. ವೈ. ರಾಘವೇಂದ್ರ ಶಾಸಕ ಎಸ್.ಎನ್. ಚನ್ನಬಸಪ್ಪ. ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್. ಜಿಲ್ಲಾ ಕಾರ್ಯವಾಹ ಚೇತನ್ ಕುಮಾರ್. ಸಚ್ಚಿದಾನಂದ ಗಣವೇಷಧಾರಿಗಳಾಗಿ ಪಾಲ್ಗೊಂಡಿದ್ದರು.
ಪಥಸಂಚಲನ ಸಾಗಿದ ರಸ್ತೆಯನ್ನು ರಂಗೋಲಿ, ಹೂವುಗಳಿಂದ ಅಲಂಕರಿಸಲಾಗಿತ್ತು.