Headlines

ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಓಮಿನಿ ಕಾರು ಡಿಕ್ಕಿ – ಓರ್ವ ಗಂಭೀರ|accident

ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಓಮಿನಿ ಕಾರು ಡಿಕ್ಕಿ – ಓರ್ವ ಗಂಭೀರ,

ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆಯಲ್ಲಿ ಶನಿವಾರ ಸಂಜೆ ಮಾರುತಿ ಓಮಿನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಓರ್ವನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. 

ತೀರ್ಥಹಳ್ಳಿ ಕಡೆಯಿಂದ ಸಾಗರಕ್ಕೆ ತೆರಳುತಿದ್ದ ಮಾರುತಿ ಓಮಿನಿ ಕಾರು ಗರ್ತಿಕೆರೆ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾದ ಘಟನೆ ಇಂದು ಸಂಜೆ ನಡೆದಿದೆ. ಕಾರಿನಲ್ಲಿ ಸಾಗರ ಮೂಲದ ಒಂದೇ ಕುಟುಂಬದ ಐವರು ಪ್ರಯಾಣಿಸುತಿದ್ದರು.

ಗರ್ತಿಕೆರೆಯಲ್ಲಿ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಕಾರಿನ ಚಲಾಯಿಸುತಿದ್ದ ಎಲೋನ್ ಲೋಫಿಸ್(52) ರವರಿಗೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಎಲೋನ್ ಲೂಫಿಸ್ (48) ದೀಪ್ತಿ ಲೊಫಿಸ್ (43)ಮಾರ್ಗರೇಟ್ ಲೂಫಿಸ್(43) ರವರಿಗೂ ತೀವ್ರವಾದ ಪೆಟ್ಟಾಗಿದ್ದು ನಾಲ್ವರನ್ನು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಇನ್ನೊಬ್ಬ ಪ್ರಯಾಣಿಕ ರತೀಕ್(16) ಎಂಬಾತನಿಗೆ ಸಣ್ಣಪುಟ್ಟ ಗಾಯಾಗಳಾಗಿವೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About The Author

Leave a Reply

Your email address will not be published. Required fields are marked *