ದೇವಸ್ಥಾನದಲ್ಲಿ ಕಳ್ಳತನ ಮಾಡಲು ಬಂದು ಸಿಕ್ಕಿಬಿದ್ದ ಕಳ್ಳರು
ತೀರ್ಥಹಳ್ಳಿ : ಇಲ್ಲಿನ ವಾಟೆ ಮನೆ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ ಮೂವರ ಕಳ್ಳರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ತಾಲೂಕಿನ ವಾಟೆಮನೆ ಬಸ್ ನಿಲ್ದಾಣದ ಸಮೀಪದ ಮುಳುಬಾಗಿಲು ವ್ಯಾಪ್ತಿಗೆ ಒಳಪಡುವ ವಾಟೆಮನೆ ದೇವಸ್ಥಾನದಲ್ಲಿ ಬೆಲೆಬಾಳುವ ಗಂಟೆ, ದೀಪ, ಕಾಣಿಕೆ ಹುಂಡಿ ಹಾಗೂ ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡಲು ಮೂವರು ಹೊಂಚು ಹಾಕಿದ್ದರು.
ಸ್ಥಳೀಯರು ಅವರನ್ನು ಗಮನಿಸಿ ವಿಚಾರಿಸುವ ವೇಳೆ ಇಬ್ಬರು ಕಳ್ಳರು ಸಿಕ್ಕಿ ಹಾಕಿಕೊಂಡಿದ್ದರು.
ಒಬ್ಬ ಕಳ್ಳ ಕಾಡಿನಲ್ಲಿ ತಪ್ಪಿಸಿಕೊಂಡು ಹೋಗಿದ್ದ. ಆದರೆ ಇಂದು ಬೆಳಗಿನ ಜಾವ ಆತನೂ ಸಿಕ್ಕಿಬಿದ್ದು ಸ್ಥಳೀಯರಿಂದ ಧರ್ಮದೇಟು ತಿಂದಿದ್ದಾನೆ. ಆತನನ್ನು ಮರದ ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ದೂರು ನೀಡಿದ್ದಾರೆ.