ಸಾಗರ : ಸೈಕಲ್ ಸವಾರನಿಗೆ ಓಮಿನಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕೆಳದಿ ಗ್ರಾಮದಲ್ಲಿ ಜು.31ರ ಸೋಮವಾರ ಸಂಜೆ ನಡೆದಿದೆ.
ಕೆಳದಿ ಗ್ರಾಮದ ಶ್ರೀಧರ್ (55) ಮೃತಪಟ್ಟ ವ್ಯಕ್ತಿ.
ಶ್ರೀಧರ್ ಸೈಕಲ್‌ನಲ್ಲಿ ಸಮೀಪದಲ್ಲಿರುವ ತಮ್ಮ ಜಮೀನಿಗೆ ನೀರು ಕಟ್ಟಿ ವಾಪಾಸ್ ಬರುತ್ತಿದ್ದ ವೇಳೆ ಓಮಿನಿ ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದಾನೆ.
ಈ ಸಂಬಂಧ ಶ್ರೀಧರ್ ಅವರ ಪುತ್ರ ಸಂದೀಪ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.