ಸಿದ್ದರಾಮಯ್ಯನವರು ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ – ಆರಗ ಜ್ಞಾನೇಂದ್ರ|Araga

ಸಿದ್ದರಾಮಯ್ಯನವರು ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ – ಆರಗ ಜ್ಞಾನೇಂದ್ರ  ರಿಪ್ಪನ್ ಪೇಟೆ – ಜು.7 ರಂದು ಸಿದ್ದರಾಮಯ್ಯನವರು ರಾಜ್ಯ ಬಜೆಟ್ ಮಂಡಿಸಿದರು. ಅದು ಬಜೆಟ್ ಪುಸ್ತಕ ಎನ್ನುವುದಕ್ಕಿಂತ ಕೇಂದ್ರ ಹಾಗೂ ರಾಜ್ಯದ ಹಳೆಯ ಬಿಜೆಪಿ ಸರ್ಕಾರವನ್ನು ಟೀಕೆ ಮಾಡುವ ಪುಸ್ತಕ.14 ನೇ ಬಾರಿ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದ್ರು. ಆದರೆ ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದು ಕೂಡ ಇತಿಹಾಸದಲ್ಲಿ ಸೇರಿರುವ ಘಟನೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು….

Read More

ಜೋಗ ಜಲಪಾತ ವೀಕ್ಷಣೆಗೆ ಹರಿದುಬಂದ ಜನಸಾಗರ!!jog falls

ಸಾಗರ : ವಿಶ್ವವಿಖ್ಯಾತ ಜೋಗ ಜಲಪಾತದ ಜಲಧಾರೆಯ ವೈಭೋಗ ವೀಕ್ಷಣೆಗೆ, ಭಾನುವಾರ ಪ್ರವಾಸಿಗರ ದಂಡೇ ಜಲಪಾತಕ್ಕೆ ಹರಿದುಬಂದಿತ್ತು. ಹಲವು ದಿನಗಳ ನಂತರ ಜೋಗವು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಆಗಾಗ ಬೀಳುವ ಮಳೆ, ಮಂಜು ಮುಸುಕಿದ ವಾತಾವರಣ, ಹಚ್ಚ ಹಸಿರಿನ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ಸೊಬಗು  ಪ್ರವಾಸಿಗರ ಮನಸೂರೆಗೊಂಡಿತು. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ, ಜೋಗಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತದೆ. ಆದರೆ ಪ್ರಸ್ತುತ ವರ್ಷ ಜೂನ್ ತಿಂಗಳಲ್ಲಿ ಮುಂಗಾರು ಮಳೆ ದುರ್ಬಲವಾಗಿದ್ದ ಕಾರಣದಿಂದ ಜಲಪಾತದಲ್ಲಿ ಜಲಧಾರೆಯ ವೈಭೋಗ…

Read More

ರೈಲಿಗೆ ಸಿಲುಕಿ ಯುವಕನ ಕಾಲು‌ ಮುರಿತ|train accident

ಯಶವಂತಪುರ – ಶಿವಮೊಗ್ಗ (16581 Town Express)  ರೈಲಿಗೆ ಸಿಲುಕಿ ತರಬೇತಿಯಲ್ಲಿರುವ ಪೊಲೀಸ್ ಸಿಬ್ಬಂದಿಯ ಕಾಲು ತುಂಡಾಗಿದೆ.  ಈ ಘಟನೆ ಶಿವಮೊಗ್ಗ ನಗರದ ಮಹಾದೇವಿ ಟಾಕೀಸ್ ಬಳಿ ಇರುವ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ. ಇವತ್ತು ಮಧ್ಯಾಹ್ನ ನಡೆದ ಘಟನೆಯಲ್ಲಿ ನಾಗರಾಜ್​ ಎಂಬವರ ಕಾಲು ಕಟ್ ಆಗಿದ್ದು, ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.  ಯಶವಂತಪುರದಿಂದ ಬರುತ್ತಿದ್ದ ಟ್ರೈನ್​ನಲ್ಲಿ ನಾಗರಾಜ್​ ರವರು ಆಗಮನಿಸಿದ್ದಾರೆ. ನಿಲ್ದಾಣದ ಬಳಿ ಅವರು ಇಳಿಯುವಾಗ ಎಡವಿ ಟ್ರೈನ್​ಗೆ ಕಾಲು ಸಿಲುಕಿಕೊಂಡಿದೆ. ತಕ್ಷಣವೇ ಅಲ್ಲಿದ್ದವರು ಬಂದು…

Read More

12 ದೇವಸ್ಥಾನದಲ್ಲಿ ಹುಂಡಿ ಕಳುವು ಮಾಡಿದ್ದ ಅಂತರ್ ಜಿಲ್ಲಾ ಹುಂಡಿ‌ ಕಳ್ಳರ ಬಂಧನ :

ಶಿವಮೊಗ್ಗ: ಅಂತರ ಜಿಲ್ಲಾ ದೇವಾಲಯಗಳಲ್ಲಿ ಕಳವು ಮಾಡಿದ್ದ ಇಬ್ಬರು ಹುಂಡಿ ಕಳ್ಳರನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ, ಹಾವೇರಿ ದಾವಣಗೆರೆ ಜಿಲ್ಲೆಯ ಒಟ್ಟು 12 ದೇವಾಲಯಗಳಲ್ಲಿ ಹುಂಡಿಗಳ ಕಳ್ಳತನ ಮಾಡಿರುವುದು ಬಯಲಿಗೆ ಬಂದಿದೆ. ದಾವಣಗೆರೆ ಜಿಲ್ಲೆ ಹೂನ್ನಾಳಿ ತಾಲೂಕು ಬುಳ್ಳಾಪುರ ಗ್ರಾಮದ ಚಿನ್ನು ಅಲಿಯಾಸ್ ಡಿ.ಜೆ (26) ಹಾಗೂ ಶಿವಮೊಗ್ಗ ತಾಲೂಕು ತರಗನಹಳ್ಳಿ ಗ್ರಾಮದ ಮಣಿಕಂಠ ಅಲಿಯಾಸ್ ಮಣಿ(26) ಬಂಧಿತ ಕಳ್ಳರು. ಕಳೆದ ತಿಂಗಳು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಂಬರಗಟ್ಟೆ ಗ್ರಾಮದ ಆಂಜನೇಯ ದೇವಾಲಯದ ಹುಂಡಿ…

Read More

ಕ್ರಿಕೆಟ್ ಬೆಟ್ಟಿಂಗ್ ನಿಂದ ಜೀವ ಕಳೆದುಕೊಂಡನಾ ತೀರ್ಥಹಳ್ಳಿಯ ಯುವಕ !???TTH

ಕ್ರಿಕೆಟ್ ಬೆಟ್ಟಿಂಗ್ ನಿಂದ ಜೀವ ಕಳೆದುಕೊಂಡನಾ ತೀರ್ಥಹಳ್ಳಿಯ ಯುವಕ !? ತೀರ್ಥಹಳ್ಳಿ : ತಾಲೂಕಿನ ಶೇಡ್ಗಾರ್ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಟ್ಟೆಹಕ್ಲಿನಲ್ಲಿ ಮೊಬೈಲ್ ಅಂಗಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಿಥುನ್ ಶೆಟ್ಟಿ ( 22 ವರ್ಷ) ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾನೆ. ಮಿಥುನ್ ಶೆಟ್ಟಿ ಉತ್ತಮ ಕ್ರಿಕೆಟ್ ಪಟುವಾಗಿದ್ದು, ಆನ್ ಲೈನ್ ಬೆಟ್ಟಿಂಗ್ ಗೆ ಬಲಿಯಾಗಿರುವುದಾಗಿ ನೆರೆಹೊರೆಯವರ ಆರೋಪವಾಗಿದೆ. ಆನ್ ಲೈನ್ ಬೆಟ್ಟಿಂಗ್ ನಿಂದಾಗಿ ಸಾಲವನ್ನು…

Read More

ಸೂಡೂರು ಸೇತುವೆ ಬಳಿ ರಸ್ತೆ ಮಧ್ಯೆ ಲಾರಿ ಅಪಘಾತ : ಸಂಚಾರ ಅಸ್ತವ್ಯಸ್ತ|accident

ಸೂಡೂರು ಸೇತುವೆ ಬಳಿ ರಸ್ತೆ ಮಧ್ಯೆ ಲಾರಿ ಅಪಘಾತ : ಸಂಚಾರ ಅಸ್ತವ್ಯಸ್ತ ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಸೂಡೂರು ಸೇತುವೆ ಸಮೀಪ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಒಂದು ಕಿಲೋಮೀಟರ್ ನಷ್ಟು ದೂರ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಇಂದು ಮುಂಜಾನೆ ನಡೆದಿದೆ. ಕುಂದಾಪುರ ಕಡೆಯಿಂದ ಆಗಮಿಸಿದ ಕಲ್ಲಿದ್ದಲು ತುಂಬಿದ ಲಾರಿಯೊಂದು ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ…

Read More

ಗೋಪಾಲಕೃಷ್ಣ ಬೇಳೂರನ್ನು ಮೆಚ್ಚಿಸಲು ನಮ್ಮ ಉಚ್ಚಾಟನೆ; ಡಾ.ರಾಜನಂದಿನಿ ವ್ಯಂಗ್ಯ|sagara

ಸಾಗರ : ಬಿಜೆಪಿ ಸೇರುವ ಮೊದಲು ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೇನೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ನನ್ನನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿರುವುದಾಗಿ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಪಕ್ಷದ ತಾಲೂಕು ಪ್ರಮುಖರಾದ ಡಾ.ರಾಜನಂದಿನಿ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿದ್ದು ಬಿಜೆಪಿ ಪರ ಕೆಲಸ ಮಾಡಿದ್ದರೆ ಉಚ್ಚಾಟನೆಗೆ ಒಂದು ಅರ್ಥ ಬರುತ್ತಿತ್ತು. ಆದರೆ ಪಕ್ಷಕ್ಕೆ ರಾಜಿನಾಮೆ ನೀಡಿ ಎರಡು ತಿಂಗಳ ನಂತರ ಉಚ್ಚಾಟನೆ ಮಾಡಿದ್ದಾಗಿ…

Read More

ನಿರಾಶಾದಾಯಕ ಬಜೆಟ್ – ಅರ್ ಎ ಚಾಬುಸಾಬ್|budget 23-24

ಸಿದ್ದರಾಮಯ್ಯ ಮಂಡಿಸಿರುವ ಈ ಬಾರಿಯ ಬಜೆಟ್ ಅತ್ಯಂತ ನಿರಾಶಾದಾಯಕ ಬಜೆಟ್ ಆಗಿದ್ದು, ಅತಿ ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಹೆಚ್ಚಿನ ಒತ್ತು ನಿಡುವಲ್ಲಿ ಎಡವಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ವಿಶ್ಲೇಷಿಸಿದ್ದಾರೆ. ಪಟ್ಟದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಯಾವುದೇ ಪ್ರೋತ್ಸಾಹವಿಲ್ಲದ ಪ್ರಗತಿಹೀನ ಬಜೆಟ್ ಆಗಿದ್ದು ರಾಜ್ಯದ ಪ್ರಗತಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ತಮ್ಮ ಚುನಾವಣಾ ಗೆಲುವಿಗೆ ಬೇಕಾದ ಗ್ಯಾರಂಟಿ ಮೂಲಕ ಏನೇನು…

Read More

ಕೋಣಂದೂರು : ಮಳೆಯಲ್ಲೇ ಶವ ಸಂಸ್ಕಾರ – ಮಾಜಿ ಗೃಹಸಚಿವರ ಸ್ವ ಕ್ಷೇತ್ರದಲ್ಲಿ ಇದೆಂತಹ ಅಮಾನವೀಯ ಘಟನೆ !!!!cremation

ಮಳೆಯಲ್ಲೇ ಶವ ಸಂಸ್ಕಾರ – ಮಾಜಿ ಗೃಹಸಚಿವರ ಸ್ವ ಕ್ಷೇತ್ರದಲ್ಲಿ ಇದೆಂತ ಅಮಾನವೀಯ ಘಟನೆ !? ತೀರ್ಥಹಳ್ಳಿ :  ತಾಲೂಕಿನ ಕೋಣಂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ದೊಡ್ಡ ಕೆರೆ ಗ್ರಾಮದಲ್ಲಿರುವ ಸ್ಮಶಾನದಲ್ಲಿ ಗ್ರಾಮಪಂಚಾಯಿತಿಯ ಬೇಜವಾಬ್ದಾರಿಯಿಂದ ಸ್ಮಶಾನದ ಮೇಲ್ಭಾಗದ ಶೀಟುಗಳು ಇದ್ದರೂ ಸೋರುತ್ತಿದ್ದು ಅದರಲ್ಲೇ ಮೃತಪಟ್ಟ ವ್ಯಕ್ತಿಯೋರ್ವರ ಶವವನ್ನು ಕುಟುಂಬವರ್ಗ ಹಾಗೂ ಸ್ಥಳೀಯರು ಮಳೆ ನೀರಿನಲ್ಲಿ ಸಂಸ್ಕಾರ ನೆಡೆಸುತ್ತಿರುವ ಅಮಾನವೀಯ ಘಟನೆ ಮಾಜಿ ಗೃಹಸಚಿವರ ಸ್ವ ಕ್ಷೇತ್ರದಲ್ಲಿ ಶುಕ್ರವಾರ ನೆಡೆದಿದೆ. ಸ್ಮಶಾನದಲ್ಲಿ ಸೂಕ್ತ ವ್ಯವಸ್ಥೆ ಹಾಗೂ ನಿರ್ವಹಣೆ ಇಲ್ಲದೆ ಇರುವುದರಿಂದ…

Read More

ಶಾಲಾ ವಾಹನ ಅಪಘಾತ – ಬಸ್ ಗಾಗಿ ಕಾಯುತಿದ್ದ ವ್ಯಕ್ತಿ ಸಾವು|accident

ಶಾಲಾ ವಾಹನಕ್ಕೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಕೂಡ್ಲಿಗೆರೆ ಗ್ರಾಮದಲ್ಲಿ ನಡೆದಿದೆ.  ಅಪಘಾತದಲ್ಲಿ ವಿಶ್ವನಾಥ ಕೊಟ್ರಪ್ಪ ಬಾಜಿಗೊಂಡರ್ (37) ಸಾವನ್ಬಪ್ಪಿರುವ ದುರ್ದೈವಿಯಾಗಿದ್ದಾನೆ. ಬಾಜಿಗೊಂಡರ್  ಹಾವೇರಿ ಜಿಲ್ಲೆಯ ಬೆಳವಗಿ ಗ್ರಾಮದ ನಿವಾಸಿಯಾಗಿದ್ದಾನೆ. ಹಾವೇರಿ ಜಿಲ್ಲೆಯ ವಾಸಿಯಾದ ಬಾಜಿಗೊಂಡರ್ ಶಿವಮೊಗ್ಗದಲ್ಲಿ ಚಾಲಕ ‌ವೃತ್ತಿ ನಿರ್ವಹಿಸುತ್ತಿದ್ದ. ದಾವಣಗೆರೆ ಕಡೆ‌ ಹೋಗಲು ‌ಕೂಡ್ಲಿಗೆರೆಯ ಗ್ರಾಮ ಪಂಚಾಯಿತಿ ಮುಂಭಾಗದ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದನು. ಭದ್ರಾವತಿಗೆ ಬಂದು ಭದ್ರಾವತಿಯ ಮೂಲಕ ದಾವಣಗೆರೆಕಡೆ ಹೊರಡಲು ಸಜ್ಜಾಗಿದ್ದ ಬಾಜಿಗೊಂಡರ್ ಗೆ…

Read More