ಹೊಸನಗರದ ಕೊಡಚಾದ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದರು.
ಕೊಡಚಾದ್ರಿ ಕಾಲೇಜಿನ ಪ್ರಾಂಶುಪಾಲ ಅಂಜನ್ ಕುಮಾರ್ ಕಾರ್ಯವೈಖರಿಯನ್ನು ಪ್ರಶ್ನಿಸಿ ಈಚೆಗೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ದೂರು ದಾಖಲಾಗಿತ್ತು.
ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಲು ಜಂಟಿ ನಿರ್ದೇಶಕರು ಕಾಲೇಜಿಗೆ ಆಗಮಿಸಿದ ವೇಳೆ ವಿದ್ಯಾರ್ಥಿಗಳಿಂದ ದಿಡೀರ್ ಪ್ರತಿಭಟನೆ ನಡೆಯಿತು.ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ದ ಧಿಕ್ಕಾರ ಕೂಗಿದ ಪ್ರಸಂಗವು ನಡೆಯಿತು.
ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಟಿಸಿ ಕೊಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಈ ಸಂಧರ್ಭದಲ್ಲಿ ಆಪಾದಿಸಿದರು.
ಪ್ರತಿಭಟನೆ ನಿರತರಾಗಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಅಳಲನ್ನು ಆಲಿಸಿದ ಅಧಿಕಾರಿಗಳು ಕೂಡಲೇ ಬೇರೆ ಉಪನ್ಯಾಸಕರೊಬ್ಬರನ್ನು ಪ್ರಾಚಾರ್ಯರ ಸ್ಥಾನಕ್ಕೆ ನಿಯೋಜಿಸಿದ ಬಳಿಕ ವಿದ್ಯಾರ್ಥಿಗಳ ಪ್ರತಿಭಟನೆ ಸ್ಥಗಿತಗೊಂಡಿತು.
ಪ್ರತಿಭಟನೆಯ ವೀಡಿಯೋ ಇಲ್ಲಿ ವೀಕ್ಷಿಸಿ👇