ರಿಪ್ಪನ್‌ಪೇಟೆ : ಪ್ರೋ ಕಬ್ಬಡಿ ಲೀಗ್ ಗೆ ಆಯ್ಕೆಯಾದ ಯುವ ಪ್ರತಿಭೆಗೆ ಮಾಜಿ ಸಚಿವರಿಂದ ಅಭಿನಂದನೆ|pro kabbadi

ರಿಪ್ಪನ್‌ಪೇಟೆ : ಹತ್ತನೇ ಆವೃತ್ತಿಯ ಪ್ರೋ ಕಬ್ಬಡಿ ಲೀಗ್ ನಲ್ಲಿ ಯುಪಿ ಯೋಧ ತಂಡಕ್ಕೆ ಆಯ್ಕೆಯಾದ ಯುವ ಪ್ರತಿಭೆ ಗಗನ್ ಗೌಡ ರವರಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಅಭಿನಂದಿಸಿದ್ದಾರೆ.


ಇಂದು ಪಟ್ಟಣದ ಸಮೀಪದ ಹಾಲುಗುಡ್ಡೆ ಗ್ರಾಮದಲ್ಲಿರುವ ಗಗನ್ ಗೌಡ ರವರ ಮನೆಗೆ ತೆರಳಿದ ಮಾಜಿ ಸಚಿವರು ಯುವ ಪ್ರತಿಭೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿ ಶುಭ ಹಾರೈಸಿದರು.


ಈ ಸಂಧರ್ಭದಲ್ಲಿ ಮುಖಂಡರಾದ ದೇವೆಂದ್ರಪ್ಪ ಗೌಡ ,ಆನಂದ್ ಮೆಣಸೆ, ನೇಮಾಕ್ಷಿ ಗೌಡ್ರು, ಜಯದೇವ, ರಾಜೇಂದ್ರ ಘಂಟೆ, ಗಣಪತಿ, ಕೀರ್ತಿ ಗೌಡ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಯುಪಿ ಯೋಧ ತಂಡಕ್ಕೆ ಆಯ್ಕೆಯಾಗಿರುವ ಗಗನ್ ಗೌಡ

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಡಿಎಂ ಉಜಿರೆ ವಿದ್ಯಾಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಕಬಡ್ಡಿ ಆಟಗಾರ ಗಗನ್ ಗೌಡ ಮುಂದೆ ಬರಲಿರುವ ಪ್ರೊ ಕಬಡ್ಡಿ ಹತ್ತನೇ ಆವೃತಿಯಲ್ಲಿ ಯುಪಿ ಯೋಧ ತಂಡದ ಪರವಾಗಿ ಆಡಲಿದ್ದಾರೆ. 


ಮೂಲತಃ ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದ ರಾಜು ಹೆಚ್ ಎಸ್ ಮತ್ತು ಪೂರ್ಣಿಮಾ ದಂಪತಿಗಳ ಪುತ್ರನಾದ ಗಗನ್ ಗೌಡ ದೈಹಿಕ ಶಿಕ್ಷಕ ಕೃಷ್ಣಾನಂದ ರಾವ್ ಅವರ ಗರಡಿಯಲ್ಲಿ ಪಳಗಿದ್ದಾರೆ. ಹಲವು ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಮೈಸೂರಿನಲ್ಲಿ ನಡೆದ ಯುವ ಕಬ್ಬಡಿ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ನೇರವಾಗಿ ಪ್ರೊ ಕಬಡ್ಡಿ ಹತ್ತನೇ ಆವೃತ್ತಿಯಲ್ಲಿ ಯುಪಿ ಯೋಧ ತಂಡದ ಸ್ಟಾರ್ ಆಟಗಾರರಾಗಿ ಆಯ್ಕೆಯಾಗಿದ್ದಾರೆ.ಪ್ರೊ ಕಬಡ್ಡಿ ಹತ್ತನೇ ಆವೃತ್ತಿಗೆ ಯು ಪಿ ಯೋಧ ತಂಡದ ಪಾಲಾದ ಮೊದಲ ಆಟಗಾರ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ. 


ರಿಪ್ಪನ್‌ಪೇಟೆಯ ರಾಮಕೃಷ್ಣ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದು ದೈಹಿಕ ಶಿಕ್ಷಕ ವಿನಯ್ ರವರ ಗರಡಿಯಲ್ಲಿ ಕಬ್ಬಡಿ ತರಬೇತಿ ಪಡೆದಿದ್ದ ಗಗನ್ ಗೌಡ ಬಳಿಕ ಎಸ್ ಡಿ ಎಂ ಉಜಿರೆ ವಿದ್ಯಾಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತಿದ್ದಾರೆ.

ಪ್ರೋ ಕಬ್ಬಡಿ ಲೀಗ್ ಟೂರ್ನಿಗೆ ಆಯ್ಕೆಯಾಗಿರುವ ನಮ್ಮೂರಿನ ಯುವ ಪ್ರತಿಭೆ ಗಗನ್ ಗೌಡ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಶುಭಾಶಯಗಳು.

Leave a Reply

Your email address will not be published. Required fields are marked *