w
Headlines
Home » ರಿಪ್ಪನ್‌ಪೇಟೆ : ತಳಲೆಯಲ್ಲಿ ಭಾರಿ ಮಳೆಗೆ ಮನೆಯ ಗೋಡೆ ಕುಸಿತ|ಪ್ರೋ ಕಬ್ಬಡಿ ಲೀಗ್ ಗೆ ಆಯ್ಕೆ – ಅಭಿನಂದನೆ|Rpet

ರಿಪ್ಪನ್‌ಪೇಟೆ : ತಳಲೆಯಲ್ಲಿ ಭಾರಿ ಮಳೆಗೆ ಮನೆಯ ಗೋಡೆ ಕುಸಿತ|ಪ್ರೋ ಕಬ್ಬಡಿ ಲೀಗ್ ಗೆ ಆಯ್ಕೆ – ಅಭಿನಂದನೆ|Rpet

ರಿಪ್ಪನ್‌ಪೇಟೆ : ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಇದರ ಪರಿಣಾಮ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿತವಾಗಿರುವ ಘಟನೆ ಬೆಳಕಿಗೆ ಬಂದಿದೆ.


ಭಾನುವಾರ ಸುರಿದ ಭಾರಿ ಮಳೆಗೆ ತಳಲೆ ಗ್ರಾಮದ ಈಶ್ವರಪ್ಪ ಎಂಬುವವರ ಮನೆಯ ಗೋಡೆ ಕುಸಿದಿದ್ದು ಯಾವುದೇ ಪ್ರಾಣಹಾನಿ ಆಗಿಲ್ಲ.

ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಪ್ರೋ ಕಬ್ಬಡಿ ಲೀಗ್ ಗೆ ಆಯ್ಕೆಯಾದ ಯುವ ಪ್ರತಿಭೆಗೆ ಮಂಜುನಾಥ್ ಗೌಡರವರಿಂದ ಅಭಿನಂದನೆ:


ರಿಪ್ಪನ್‌ಪೇಟೆ : ಹತ್ತನೇ ಆವೃತ್ತಿಯ ಪ್ರೋ ಕಬ್ಬಡಿ ಲೀಗ್ ನಲ್ಲಿ ಯುಪಿ ಯೋಧ ತಂಡಕ್ಕೆ ಆಯ್ಕೆಯಾದ ಯುವ ಪ್ರತಿಭೆ ಗಗನ್ ಗೌಡ ರವರಿಗೆ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಕಾರ್ಯಾಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಅಭಿನಂದಿಸಿದ್ದಾರೆ.


ಇಂದು ಪಟ್ಟಣದ ಸಮೀಪದ ಹಾಲುಗುಡ್ಡೆ ಗ್ರಾಮದಲ್ಲಿರುವ ಗಗನ್ ಗೌಡ ರವರ ಮನೆಗೆ ತೆರಳಿದ ಮಂಜುನಾಥ್ ಗೌಡ ರವರು ಯುವ ಪ್ರತಿಭೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಎಂ ಎಂ ಪರಮೇಶ್ ,ಚಿಂತು ಹಾಲುಗುಡ್ಡೆ ,ರಾಜು ಹೆಚ್ ಎಸ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.