w
Headlines
Home » ಕ್ಯಾಂಟೀನ್ ಮಾಲೀಕನಿಗೆ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ|beluru

ಕ್ಯಾಂಟೀನ್ ಮಾಲೀಕನಿಗೆ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ|beluru

ಕ್ಯಾಂಟೀನ್ ಮಾಲೀಕನಿಗೆ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ  ಶಾಸಕ ಬೇಳೂರು ಗೋಪಾಲಕೃಷ್ಣ.

ರಿಪ್ಪನ್ ಪೇಟೆ : ಸರಳ ಸಜ್ಜನಿಕೆಯ ಮೂಲಕ ಜನಸಾಮಾನ್ಯರ ಶಾಸಕರಾಗಿ ಆಯ್ಕೆಯಾದ  ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ  ಘಟನೆ ಇಂದು ರಿಪ್ಪನ್ ಪೇಟೆ ಪಟ್ಟಣದಲ್ಲಿ ನಡೆದಿದೆ.


 ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಅತಿವೃಷ್ಟಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸುವುದರ ಸಲುವಾಗಿ ಸಚಿವರು ಬರುವುದಕ್ಕಿಂತ ಮುಂಚಿತವಾಗಿ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದರು.ಈ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅಭಿಮಾನಿ ಬಳಗದವರು ಗ್ರಾಮ ಪಂಚಾಯಿತಿ ಸಮೀಪದಲ್ಲಿರುವ ಬೃಂದಾವನ ಕ್ಯಾಂಟೀನ್ ನಲ್ಲಿ ಕಾಫಿ ಕುಡಿಯಲು ಆಹ್ವಾನಿಸಿದ ಹಿನ್ನೆಲೆಯಲ್ಲಿ ಕ್ಯಾಂಟೀನಿಗೆ ಭೇಟಿ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ಅಭಿಮಾನಿ ಬಳಗದವರ ಜೊತೆಯಲ್ಲಿ ಕಾಫಿ ಬೋಂಡವನ್ನು ಸೇವಿಸಿದರು.

ನಂತರ ರುಚಿ ರುಚಿಯಾದ ಬೋಂಡವನ್ನು ತಯಾರಿಸುವುದರ ಕುರಿತು ಕ್ಯಾಂಟೀನ್ ಮಾಲೀಕನಿಗೆ ತರಬೇತಿ ನೀಡಿದ ಅವರು ರುಚಿ ರುಚಿಯಾದ ಬಿಸಿ ಬಿಸಿ ತಿಂಡಿಗಳನ್ನು  ತಯಾರಿಸಿ ಮಾರಾಟ ಮಾಡಿದರೆ ಗ್ರಾಹಕರು ನಿಮ್ಮ ಹೋಟೆಲ್ ಅನ್ನು ಹುಡುಕಿಕೊಂಡು ಬರುತ್ತಾರೆ. ಹಾಗೆಯೇ  ನಿಮಗೂ ಒಳ್ಳೆಯ ಕೀರ್ತಿ ಬರುತ್ತದೆ ಎಂದು ಕ್ಯಾಂಟೀನ್  ಮಾಲೀಕರಾದ ಸ್ವಾಮಿಯವರಿಗೆ  ಸಲಹೆ ನೀಡಿದರು.

 ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನನಗೆ ಕೆಲವೊಂದು ಅಡಿಗೆ ಮತ್ತು ತಿಂಡಿಗಳ ತಯಾರಿಕೆಯ ಬಗ್ಗೆ  ಅನುಭವವಿದ್ದು  ರುಚಿ ಮತ್ತು ಶುಚಿಯಾದ ಆಹಾರವನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಹೊಂದ ಬಹುದು.  ಹಾಗೆಯೇ  ಚಿಕ್ಕ ಚಿಕ್ಕ ಕ್ಯಾಂಟೀನ್ ಗಳಲ್ಲಿ  ಗುಣಮಟ್ಟದ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಮಾರಾಟ  ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

 ಈ ಸಂದರ್ಭದಲ್ಲಿ ಬೇಳೂರು ಗೋಪಾಲಕೃಷ್ಣ ಅಭಿಮಾನಿಗಳು  ನೂರಾರು ಸಂಖ್ಯೆಯಲ್ಲಿ ಕ್ಯಾಂಟೀನ್ ಮುಂದೆ ನೆರೆದಿದ್ದರೂ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.