w
Headlines
Home » ನೇಣು ಬಿಗಿದ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಶವ ಅರಣ್ಯದಲ್ಲಿ ಪತ್ತೆ|devangi

ನೇಣು ಬಿಗಿದ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಶವ ಅರಣ್ಯದಲ್ಲಿ ಪತ್ತೆ|devangi

ತೀರ್ಥಹಳ್ಳಿ : ನೇಣು ಬಿಗಿದ ಸ್ಥಿತಿಯಲ್ಲಿ ಅರಣ್ಯದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ದೇವಂಗಿ ಸಮೀಪದ ಇಂದಿರಾ ನಗರದಲ್ಲಿ ನಡೆದಿದೆ.




ಮೃತಪಟ್ಟಿರುವ ಮಹಿಳೆಯನ್ನು ಶಶಿಕಲಾ (34) ಎಂದು ಗುರುತಿಸಲಾಗಿದೆ.

ಶಶಿಕಲಾ ತಡರಾತ್ರಿಯಿಂದ ಮನೆಯಿಂದ ನಾಪತ್ತೆಯಾಗಿದ್ದರು.ರಾತ್ರಿಯೆಲ್ಲಾ ಪತ್ನಿಗಾಗಿ ಹುಡುಕಾಟ ನಡೆಸಿದ ಪತಿ ಸುಬ್ರಹ್ಮಣ್ಯ ಇಂದು ಬೆಳಿಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.




ಇಂದು ಮಧ್ಯಾಹ್ನ ಮನೆಯ ಹಿಂಭಾಗ ಇರುವ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶಶಿಕಲಾ ಶವ ಪತ್ತೆಯಾಗಿದ್ದು ,ನೇಣು ಬಿಗಿದ ಸ್ಥಿತಿ ಅನುಮಾನಸ್ಪದವಾಗಿ ಕಂಡುಬಂದಿದ್ದು ಕೊಲೆಯ ರೀತಿ ಬಿಂಬಿತವಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತಿದ್ದಾರೆ.

ಸ್ಥಳಕ್ಕೆ ಆಗಮಿಸಿದ ತೀರ್ಥಹಳ್ಳಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ.





Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.