POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಅರಣ್ಯಪ್ರದೇಶದಲ್ಲಿ ಅರೆಬರೆ ಸುಟ್ಟು ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ !!lightning

ಅರಣ್ಯಪ್ರದೇಶದಲ್ಲಿ ಅರೆಬರೆ ಸುಟ್ಟು ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ !


ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ  ಸಮೀಪದ ಬೆಳಂದೂರು ಚೆನ್ನಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮೃತದೇಹ  ಅರೆಬರೆ ಸುಟ್ಟು ಕೊಳೆತ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿರುವ ಘಟನೆ ನಡೆದಿದೆ.




ಮೃತನನ್ನು ಬೆಳಂದೂರು ಗ್ರಾಮದ ಬತ್ತಿ ರಮೇಶಪ್ಪ(55) ಎಂದು ಗುರುತಿಸಲಾಗಿದೆ.

ಬೆಳಂದೂರು ಗ್ರಾಮದ ಬತ್ತಿ ರಮೇಶಪ್ಪ ಎಂಬ ವ್ಯಕ್ತಿ  ಕಳೆದ ೪ ದಿನಗಳಿಂದ ಕಾಣೆಯಾಗಿದ್ದು  ಎಲ್ಲಾ ಕಡೆ ಹುಡುಕಿ ಸಂಬಂಧಿಕರ ಮನೆಗೆ ಹೋಗಿರಬಹುದು ತಿರುಗಿ ಬರುತ್ತಾರೆ ಎಂದುಕೊಂಡಿದ್ದರು.

 ಚೆನ್ನಾಪುರ ಗ್ರಾಮದ ವ್ಯಕ್ತಿಯೊಬ್ಬರು ಕಳೆದು ಹೋಗಿದ್ದ ಆಕಳು ಕರು ಅರಣ್ಯದಲ್ಲಿ ಹುಡುಕುತ್ತಿದ್ದಾಗ ಮೃತದೇಹ ಕಂಡುಬಂದಿದೆ.




 ಮೃತಶರೀರ ಹಾಗೂ ಸುತ್ತಮುತ್ತಲೂ  ಕರಕಲು ಸ್ಥಿತಿಯಲ್ಲಿದ್ದುದರಿಂದ ಸಿಡಿಲು ಬಡಿದು ಮೃತಪಟ್ಟಿರಬಹುದೆಂದು ಗ್ರಾಮಸ್ಥರು ಶಂಕಿಸಿದ್ದು ಮರಣೋತ್ತರ ವರದಿ ಹಾಗೂ ಪೋಲಿಸ್‌ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ.







Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.