ಕುಸಿದು ಬಿದ್ದು ವ್ಯಕ್ತಿ ಸಾವು
ರಿಪ್ಪನ್ ಪೇಟೆ: ಇಲ್ಲಿ ಪುರಮಠ ವಾಸಿ ಕೃಷಿಕ ಬಿ. ಕೆ. ಲೋಕಪ್ಪ (68) ಅವರು ಸೋಮವಾರ ಮೂರು ವರ್ಷದ ಮೊಮ್ಮಗನೊಂದಿಗೆ ಜಮೀನಿಗೆ ತೆರಳಿದವರು ಅಲ್ಲಿಯೇ ಮೃತಪಟ್ಟಿದ್ದಾರೆ.
ಸರ್ವೆ ನಂಬರ್ 135 ರ ಹಕ್ಕಲಿನಲ್ಲಿ ಬಿಟ್ಟಿದ್ದ ಕವಳಿ ಹಣ್ಣು ಗಳನ್ನು ಮೊಮ್ಮಗನಿಗೆ ಕಿತ್ತು ಕೊಟ್ಟು ಮನೆಗೆ ಕಳಿಸಿದ್ದರು.ಮಧ್ಯಾಹ್ನ 12:00 ಆದರೂ ಮನೆಗೆ ಹಿಂದಿರುಗದ ಇವರನ್ನು ಕುಟುಂಬಸ್ಥರು ಹುಡುಕಲು ಹೋದಾಗ ಹಕ್ಕಲಿನಲ್ಲಿ ಲೋಕಪ್ಪರವರ ಮೃತ ದೇಹ ಪತ್ತೆಯಾಗಿದೆ.
ಹೃದಯ ಘಾತದಿಂದ ಕುಸಿದು ಬಿತ್ತು ಸಾವನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಇದ್ದಾರೆ.
ವಿದ್ಯುತ್ ಸಂಪರ್ಕವಿಲ್ಲದ ಶವಗಾರ – ನಾಗರೀಕರ ಆಕ್ರೋಶ
ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಯ ತಪಾಸಣೆಗೆ ತಂದಾಗ ವೈದ್ಯರು ಮೊಬೈಲ್ ಟಾರ್ಚ್ ಹಾಗೂ ಚಾರ್ಜರ್ ಬ್ಯಾಟರಿ ಹಿಡಿದು ಮರಣೋತ್ತರ ಪರೀಕ್ಷೆ ನಡೆಸಿದರು.
ಶವಗಾರದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದನ್ನು ಕಂಡು ಇಲ್ಲಿನ ಅವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಹಗಲು ವೇಳೆಯಲ್ಲಿ ಇಬ್ಬರು ವೈದ್ಯರು ಕಾರ್ಯ ನಿರ್ವಹಿಸುತ್ತಿರುವ ಈ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಯಾವುದೇ ವೈದ್ಯರು ಕರ್ತವ್ಯದಲ್ಲಿ ಇರುವುದಿಲ್ಲ. ಈ ಬಗ್ಗೆ ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ವೈಧ್ಯಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.