Headlines

ತೀರ್ಥಹಳ್ಳಿ: ಬ್ಯಾಂಗಲ್ ಸ್ಟೋರ್ ಅಂಗಡಿಯಲ್ಲಿ ಬೆಂಕಿ ಅವಘಡ – ಲಕ್ಷಾಂತರ ರೂ ನಷ್ಟ|FIRE

ಬ್ಯಾಂಗಲ್ ಸ್ಟೋರ್ ಅಂಗಡಿಯಲ್ಲಿ ಬೆಂಕಿ ಅವಘಡ – ಲಕ್ಷಾಂತರ ರೂ ನಷ್ಟ

ತೀರ್ಥಹಳ್ಳಿ : ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿರುವ ಕಲ್ಪವೃಕ್ಷ ಹೋಟೆಲ್ ಪಕ್ಕದಲ್ಲಿರುವ ಬ್ಯಾಂಗಲ್ ಸ್ಟೋರ್ ನಲ್ಲಿ ಶಾರ್ಟ್  ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡಿದ್ದು ಅಂಗಡಿ ಒಳಗೆ ಇದ್ದ ಹಲವು ಸಾಮಗ್ರಿಗಳು ಬೆಂಕಿಗೆ ಅನಾಹುತವಾಗಿದೆ.


ವಯಸ್ಸಾದ ವೃದ್ದೆಯಾದ ಲಕ್ಷ್ಮಿ ಎಂಬುವರು ಅಂಗಡಿ ನೆಡೆಸಿ ಜೀವನ ನೆಡೆಸುತ್ತಿದ್ದರು. ಅಂಗಡಿ ಬಾಗಿಲು ಹಾಕಿ ಬ್ಯಾಂಕ್ ಗೆ ಹೋಗಿದ್ದಾಗ ಈ ಘಟನೆ ಜರುಗಿದೆ.2 ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಬೆಂಕಿಗೆ ಅನಾಹುತ ಆಗಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಮೆಸ್ಕಾಂ ಇಲಾಖೆ ಸಿಬ್ಬಂದಿ ಬಂದು ಬೆಂಕಿ ನಂದಿಸುತ್ತಿದ್ದಾರೆ.

ಇದಕ್ಕೂ ಮೊದಲು ಬೆಂಕಿ ಹತ್ತಿಕೊಂಡು ಹೊಗೆ ಬರುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ನೆಡೆಸಿದ್ದರು. 

ವಿಷಯ ತಿಳಿದ ಶಾಸಕ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *