w
Headlines
Home » ಮಧು ಬಂಗಾರಪ್ಪ ನವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹ|congress

ಮಧು ಬಂಗಾರಪ್ಪ ನವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹ|congress

ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾದ ಮಧು ಬಂಗಾರಪ್ಪ ರವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ ಕಂದಾಯ ಇಲಾಖೆಯ ಜವಾಬ್ದಾರಿ ನೀಡುವಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ ಒತ್ತಾಯಿಸಿದ್ದಾರೆ.




ರಿಪ್ಪನ್‌ಪೇಟೆಯಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಮಲೆನಾಡು ಭಾಗಗಳ ಜ್ವಲಂತ ಸಮಸ್ಯೆಯಾದ ಭೂ ಹಕ್ಕಿನ ಸಮಸ್ಯೆ ಬಗ್ಗೆ ಬಂಗಾರಪ್ಪ,ಕಾಗೋಡು ತಿಮ್ಮಪ್ಪ ನಂತರದಲ್ಲಿ ಹೆಚ್ಚಿನ ಅರಿವು ಇರುವ ಮಧು ಬಂಗಾರಪ್ಪ ರವರನ್ನು ಉಪಮುಖ್ಯಮಂತ್ರಿ ಮಾಡುವುದರೊಂದಿಗೆ ಕಂದಾಯ ಇಲಾಖೆಯ ಜವಬ್ದಾರಿ ನೀಡಬೇಕು ಎಂದರು.

ಮಲೆನಾಡು ಭಾಗದಲ್ಲಿ ಕಷ್ಟದ ಸಮಯದಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಹಿಂದುಳಿದ ವರ್ಗಗಳನ್ನು ಸಂಘಟಿಸಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದಾರೆ.




ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಮತ್ತೆ ಗತವೈಭವ ಮರಳಿ ತರುವ ನಿಟ್ಟಿನಲ್ಲಿ ನಿರಂತರ ಶ್ರಮಿಸಿರುವ ಅವರ ಶ್ರಮವನ್ನು ಹೈಕಮಾಂಡ್ ಗುರ್ತಿಸಬೇಕು ಎಂದು ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಒತ್ತಾಯಿಸಿದ್ದಾರೆ.

ಈ ಸಂಧರ್ಭದಲ್ಲಿ ತಾಲೂಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಸೀಫ಼್ ಭಾಷಾಸಾಬ್, ಮುಖಂಡರಾದ ಮಳವಳ್ಳಿ ಮಂಜುನಾಥ್ , ನವೀನ್ ಹಾಗೂ ಇನ್ನಿತರರಿದ್ದರು.





Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.