w
Headlines
Home » ಕಾಂಗ್ರೆಸ್ 140ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಲಿದೆ – ಮಧು ಬಂಗಾರಪ್ಪ

ಕಾಂಗ್ರೆಸ್ 140ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಲಿದೆ – ಮಧು ಬಂಗಾರಪ್ಪ

ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ‌ ಕಾಂಗ್ರೆಸ್ ಪಕ್ಷ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರು ಹಾಗೂ ಸೊರಬ ವಿಧಾನಸಭಾ ಅಭ್ಯರ್ಥಿಯಾದ ಮಧುಬಂಗಾರಪ್ಪ ಹೇಳಿದರು.




ಅವರು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆದ್ದಾರಿಪುರ ಸಮೀಪದ ಕಗ್ಗಲಿಜಡ್ಡು ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದ ಶರಾವತಿ ಮುಳುಗಡೆಯಾಗಿ ಅಲ್ಲಿನ ರೈತರು ಮನೆಮಠವನ್ನು ಕಳೆದು ಕೊಂಡ ಸಂತ್ರಸ್ಥರು ಹೆಚ್ಚು ಹೊಸನಗರ ತಾಲ್ಲೂಕಿನಲ್ಲಿ ನೆಲೆಸಿದ್ದು ರಾಜ್ಯಕ್ಕೆ ಬೆಳಕು ನೀಡಿದ ಸಂತ್ರಸ್ಥರುಗಳು ಹಣತೆಯ ಬುಡದಲ್ಲಿನ ಕತ್ತಲೆಯಲ್ಲಿ ಬದುಕುವಂತಾಗಿದ್ದು ಅವರ ಜೀವನೋಪಾಯಕ್ಕಾಗಿ ಬಗರ್‌ಹುಕುಂ ಜಮೀನು ಸಾಗುವಳಿ ಮಾಡಿರುವ ರೈತರಿಗೆ ಹಕ್ಕು ಪತ್ರ ನೀಡುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ವಿಫಲವಾಗಿದೆ ಈ ಬಗ್ಗೆ ನಾನು ಸರ್ಕಾರದ ಗಮನಸೆಳೆಯುವ ಉದ್ದೇಶದಿಂದಾಗಿ ಪಾದಯಾತ್ರೆ ನಡೆಸಲಾಗದ್ದು ಆಗ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯವರು ೧೫ ದಿನದೊಳಗೆ ನಿರಾಶ್ರಿತರಿಗೆ ಹಕ್ಕುಪತ್ರ ಕೊಡುವುದಾಗಿ ಭರವಸೆ ನೀಡಿದ ಡಬಲ್ ಇಂಜಿನ್ ಸರ್ಕಾರದವರಿಗೆ ಗ್ರಾಮೀಣ ರೈತರ ಬವಣೆ ತಿಳಿಯಲ್ಲಿಲ್ಲವೇ ಎಂದ ಅವರು ನಮ್ಮ ತಂದೆ ಬಂಗಾರಪ್ಪಜಿಯವರ ಆಭಿಮಾನಿ ದೇವರುಗಳು ನೀವು ಆವರನ್ನು ಕಂಡಂತೆ ನಾನು ನಿಮ್ಮಗಳನ್ನು ತಂದೆಯ ಸ್ಥಾನದಲ್ಲಿಟ್ಟು ನೋಡುವ ಪುಣ್ಯ ನನಗೆ ಬಂದಿದೆ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ಜೈಕಾರದ ಕೂಗು ಮೊಳಗಿತು.


ಗ್ಯಾರಂಟಿ ಕಾರ್ಡ್ ಮತ್ತು ಉಚಿತ ೨೦೦ ಯುನಿಟ್ ವಿದ್ಯುತ್ ಸೇರಿದಂತೆ ಬಿಪಿಎಲ್ ಪಡಿತರ ದಾರರಿಗೆ ೧೦ ಕೆ.ಜಿ.ಅಕ್ಕಿ ಹೀಗಿ ಹಲವು ಜನಹಿತ ಕಾರ್ಯಕ್ರಮಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಾರ್ಯಗತಗೊಳಿಸುವುದಾಗಿ ಹೇಳಿ ನಮ್ಮ ಕಾರ್ಯಕರ್ತರು ಈ ಗ್ಯಾರಂಟಿ ಕಾರ್ಡ್ ಕುರಿತು ಮತದಾರರಲ್ಲಿ ಮನವರಿಕೆ ಮಾಡುವಂತೆ ಮನವಿ ಮಾಡಿ ಬಂಗಾರಪ್ಪಾಜಿ ಮತ್ತು ಕಾಗೋಡು ತಿಮ್ಮಪ್ಪನವರ ಭಾವಚಿತ್ರ ಹಾಕಿಕೊಂಡು ಮತಕೇಳಿದರೆ ಪುಕ್ಕಟ್ಟೆ ಮತ ಬರುತ್ತದೆಂದು ಹೇಳಿ ಈಗಾಗಲೇ ನಮ್ಮ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್ ನಲ್ಲಿ ನನ್ನ ಮತ್ತು ಈ ಇಬ್ಬರ ಪೋಟೋ ಹಾಕಿಕೊಂಡು ಮನೆಮನೆಗೆ ತಲುಪಿಸಿರುವುದಾಗಿ ಹೇಳಿದರು.




ಇದೇ ಸಂದರ್ಭದಲ್ಲಿ ತಳಲೆಯ ಬೇಕರಿ ಸುರೇಶ್ ಮತ್ತು ಇನ್ನಿತರ ಯುವಕರ ತಂಡು ಬಿಜೆಪಿ ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ ಪಕ್ಷಕ್ಕೆ ಮಧುಬಂಗಾರಪ್ಪನವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

ಈ ಸಭೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಬಿ.ಪಿ.ರಾಮಚಂದ್ರ,ಶ್ವೇತಾ ಆರ್.ಬಂಡಿ,ಎಐಸಿಸಿ ವಕ್ತಾರ ಆದರ್ಶ ಹುಂಚದಕಟ್ಟೆ,ತಾಲ್ಲೂಕ್ ಪಂಚಾಯ್ತಿ ಮಾಜಿ ಸದಸ್ಯ ಬಿ.ಜಿ.ಚಂದ್ರುಮೌಳಿ, ತಳಲೆಗೌರಮ್ಮ,ಕಲ್ಲೂರು ವಾಸಪ್ಪಗೌಡ,ಅಮ್ಮಿರ್‌ಹಂಜಾ ರಿಪ್ಪನ್‌ಪೇಟೆ,ಕಲ್ಲೂರು ತೇಜಮೂರ್ತಿ,ಕೆ.ಎಸ್.ಲೋಕಪ್ಪಗೌಡ,ಷಣ್ಮುಖಪ್ಪ,ವೀರಪ್ಪ,ಸಳ್ಳಿ ಸ್ವಾಮಿರಾವ್,ಮಳವಳ್ಳಿ ಮಂಜುನಾಥ, ಗುರುಜಯನಗರ,ಧರ್ಮಪ್ಪ ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.