Headlines

ರಿಪ್ಪನ್‌ಪೇಟೆ : ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ನಾಪತ್ತೆಯಾದ ದಂಪತಿಗಳು|missing

ಮೂರು ಹೆಣ್ಣು ಮಕ್ಕಳನ್ನು ಬಿಟ್ಟು ನಾಪತ್ತೆಯಾದ ದಂಪತಿಗಳು

ರಿಪ್ಪನ್ ಪೇಟೆ : ಚಿಕ್ಕವಯಸ್ಸಿನ ಮೂರು ಹೆಣ್ಣು ಮಕ್ಕಳನ್ನು ಬಿಟ್ಟು ದಂಪತಿಗಳು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಂದೂರು ಗ್ರಾಮದಲ್ಲಿ ನಡೆದಿದೆ.



ಮಾದಾಪುರ ಗ್ರಾಮದ ಅನುಷಾ (45) ಹಾಗೂ ವಿಜಯ್ (50) ಮೂರು ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿರುವ ದಂಪತಿಗಳು.

ದಿನಾಂಕ 25-3-2023 ರಂದು ತೆರಳಿದ್ದ ಅನುಷಾ ಮತ್ತು ವಿಜಯ್ ಮನೆಗೆ ಮರಳಿ ಬರಲಿಲ್ಲ.ಸಂಬಂಧಿಕರು ಅಥವಾ ಪರಿಚಯಸ್ಥರ ಮನೆಗೆ ಹೋಗಿರಬಹುದು ಎಂದು ಭಾವಿಸಿ ಕುಟುಂಬಸ್ಥರು ಎಲ್ಲಾ ಕಡೆ ಹೋಗಿ ಪರಿಶೀಲನೆ ನಡೆಸಿದ್ದಾರೆ.




ಆದರೆ ದಂಪತಿಗಳು ಎಲ್ಲಿಯೂ ಪತ್ತೆಯಾಗದ  ಕಾರಣ ರಿಪ್ಪನ್ ಪೇಟೆ ಠಾಣೆಯಲ್ಲಿ ಅನುಷಾ ರವರ ತಾಯಿ ತಡವಾಗಿ ದೂರು ಸಲ್ಲಿಸಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸರು ದಂಪತಿಗಳ ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.





















Leave a Reply

Your email address will not be published. Required fields are marked *