Headlines

ಮೆಗ್ಗಾನ್ ಆವರಣದಲ್ಲಿ ಮೃತ ಮಗುವನ್ನು ಎಳೆದು ತಂದ ನಾಯಿ|Shivamogga news

ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಗಾಗ ನಂಬಲಾಗದಂತಹ ಘಟನೆಗಳು ನಡೆಯುತ್ತಿರುತ್ತವೆ. ಬೆನ್ನಲ್ಲೆ ಮುಚ್ಚಿಹಾಕುವಂತಹ ಘಟನೆಗಳು ನಡೆಯುತ್ತಿರುತ್ತವೆ. ಸದ್ಯ ನಡೆದ ಘಟನೆಯೊಂದು ದೊಡ್ಡಪೇಟೆ ಪೊಲೀಸರು ಕೇಸ್​ ದಾಖಲಿಸಿದ್ದರಿಂದ ಬೆಳಕಿಗೆ ಬಂದಿದೆ.




ಕಳೆದ ಮಾರ್ಚ್​ 31 ರಂದು ಬೆಳಗಿನ ಜಾವ, ನಾಯಿಯೊಂದು ಎಳೆಮಗುವನ್ನು ಕಚ್ಚಿಕೊಂಡು ಹೆರಿಗೆ ವಾರ್ಡ್​ನ ಬಳಿಯಲ್ಲಿ ಓಡಾಡಿದೆ. ಇದನ್ನ ಕಂಡ ಸಾರ್ವಜನಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. 

ಭದ್ರತಾ ಸಿಬ್ಬಂದಿಯು ನಾಯಿಯನ್ನು ಹೆದರಿಸಿ ಓಡಿಸಿ, ಮಗುವನ್ನ ಹೆರಿಗೆ ವಾರ್ಡ್​ಗೆ ತಂದು ವೈದ್ಯರ ಬಳಿ ಪರೀಕ್ಷಿಸಿದ್ದಾರೆ. ಆದರೆ ಮಗು ಸಾವನ್ನಪ್ಪಿತ್ತು. 




ನವಜಾತ ಹೆಣ್ಣುಶಿಶುವನ್ನು ಯಾರೋ ಮಕ್ಕಳ ವಾರ್ಡ್​ನ ಹಿಂಬಾಗದಲ್ಲಿ ಬಿಟ್ಟು ಹೋಗಿದ್ದು, ಆ ಮಗುವನ್ನು ನಾಯಿ ಕಚ್ಚಿಕೊಂಡು ಓಡಾಡಿದೆ. ಆಗಷ್ಟೆ ಹುಟ್ಟಿದ್ದ ಮಗುವನ್ನು ಹೀಗೆ ಬಿಟ್ಟು ಹೋದ ಅದರ ಫೋಷಕರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಮೆಗ್ಗಾನ್​  ಆಸ್ಪತ್ರೆ ಭದ್ರತಾ ಸಿಬ್ಬಂದಿ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.




ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Leave a Reply

Your email address will not be published. Required fields are marked *