Headlines

ಕಾಲೇಜಿನ ಗ್ರಂಥಾಲಯದಲ್ಲಿ ಪ್ರತ್ಯಕ್ಷವಾದ ಹಾವು – ಭಯ ಮೂಡಿಸಿದ್ದ ಬರೋಬ್ಬರಿ 8 ಅಡಿ ಉದ್ದದ ಹಾವು

ಶಿವಮೊಗ್ಗ ನಗರದ ಸಹ್ಯಾದ್ರಿ ಸೈನ್ಸ್ ಕಾಲೇಜು ಆವರಣದಲ್ಲಿರುವ ಗ್ರಂಥಾಲಯದಲ್ಲಿಯೇ ಹಾವೊಂದು ಕಾಣಿಸಿಕೊಂಡಿತ್ತು. 




ಮೊನ್ನೆ ಕಾಲೇಜಿನ ಗ್ರಂಥಾಲಯದಲ್ಲಿ ಸುಮಾರು 8 ಅಡಿ ಉದ್ದದ ಹಾವೊಂದು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಪುಸ್ತಕಗಳ ರಾಶಿಯ ಅಡಿಯಲ್ಲಿ ಸೇರಿಕೊಂಡಿದ್ದ ಹಾವು, ಆಗಾಗ ಸದ್ದು ಮಾಡುತ್ತಿತ್ತು. ಮೊದಲೇ ನಿಶ್ಚಬ್ಧವಾಗಿದ್ದ ಲೈಬ್ರರಿಯಲ್ಲಿ ಹಾವಿನ ಸದ್ದು ತುಸು ಜೋರಾಗಿಯೇ ಕೇಳಿಬರುತ್ತಿತ್ತು. 


ಇನ್ನೂ ಏನು ಶಬ್ಧವಾಗುತ್ತಿದೆ ಎಂದು ನೋಡಿದ ಸಿಬ್ಬಂದಿ ಹಾವೊಂದು ಗೃಂಥಾಲಯವನ್ನು ಸೇರಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಹಾವನ್ನು ಸುರಕ್ಷಿತವಾಗಿ ಹಿಡಿಯಬಲ್ಲ ಸ್ನೇಕ್​ ಜಯಂತ್ ಬಾಬುರನ್ನ ಸಂಪರ್ಕಿಸಿದ್ದಾರೆ. 




ಕರೆ ಮಾಡಿದ ಬೆನ್ನಲ್ಲೆ ಸ್ಥಳಕ್ಕೆ ಬಂದ ಸ್ನೇಕ್ ಜಯಂತ್ , ಸುರಕ್ಷಿತವಾಗಿ ಹಾವನ್ನು ಹಿಡಿದಿದ್ದಾರೆ. 

ಕೊನೆಯಲ್ಲಿ 8 ಅಡಿ ಉದ್ದವಿದ್ದ ಹಾವು ಕೆರೆಹಾವು ಎಂಬುದು ಗೊತ್ತಾಗಿ ಅಲ್ಲಿದ್ದವರೆಲ್ಲಾ  ನಿಟ್ಟುಸಿರು ಬಿಟ್ಟರು. 



About The Author

Leave a Reply

Your email address will not be published. Required fields are marked *