w
Headlines
Home » ಹಳ್ಳಿ ಮಕ್ಕಳ ರಂಗ ಹಬ್ಬದ ಸಮಾರೋಪ ಹಾಗೂ ಬಸವ ಜಯಂತಿ ಸಂಭ್ರಮೋತ್ಸವ|Ripponpet

ಹಳ್ಳಿ ಮಕ್ಕಳ ರಂಗ ಹಬ್ಬದ ಸಮಾರೋಪ ಹಾಗೂ ಬಸವ ಜಯಂತಿ ಸಂಭ್ರಮೋತ್ಸವ|Ripponpet

“ಹಳ್ಳಿ ಮಕ್ಕಳ ರಂಗ ಹಬ್ಬದ ಸಮಾರೋಪ ಹಾಗೂ ಬಸವ ಜಯಂತಿ ಸಂಭ್ರಮೋತ್ಸವ’’
ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ಅರಿವಿಲ್ಲದಂತಾಗಿದೆ :ಡಾ. ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ.

ರಿಪ್ಪನ್‌ಪೇಟೆ;- ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಹಾಗೂ  ಸಂಸ್ಕಾರ ಇಲ್ಲದಂತಾಗಿದೆ.ಇತ್ತೀಚಿನ ದಿನಗಳಲ್ಲಿ  ನಾಟಕ ರಂಗಕಲೆ ಜಾನಪದ ತತ್ವ ಪದಗಳಿಂದ ನಮ್ಮ ಕಲೆ ಸಂಸ್ಕೃತಿ ಗಳು ಜೀವಂತವಾಗಿ ಉಳಿದಿದ್ದು ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಕ್ಕಳ ರಂಗ ಹಬ್ಬ ಪ್ರೇರಕವೆಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.


ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ದಿ.ಎಂ.ಕೆ.ರೇಣುಕಪ್ಪಗೌಡ ಪ್ರತಿಷ್ಠಾನ ಮತ್ತು ಮಲೆನಾಡು ಕಲಾ ತಂಡ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ “ಹಳ್ಳಿ ಮಕ್ಕಳ ರಂಗ ಹಬ್ಬದ  15ದಿನಗಳ ತರಬೇತಿ ಶಿಬಿರದ ಸಮಾರೋಪ ಮತ್ತು ಬಸವ ಜಯಂತಿ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ ಬಸವಣ್ಣನವರ ವಚನಗಳು ಮತ್ತು ಸಂತ ಶಿಶುನಾಳ ಷರೀಫ್ ರ ಮತ್ತು ಗುರುಗೋವಿಂದ ಭಟ್ಟರ  ತತ್ವ ಪದಗಳು ಇಂದಿನ ಜನಾಂಗಕ್ಕೆ ದಾರಿ ದೀಪವಾಗಿವೆ.ಅವರ ತತ್ವ ಪದಗಳಿಂದ ಮಕ್ಕಳ ಮುಂದಿನ ಬದುಕಿನ ದಿಕ್ಕು ಬದಲಿಸಿಕೊಳ್ಳಲು  ಸಹಕಾರಿಯಾಗಿವೆ.ವಿದ್ಯಾಭ್ಯಾಸದೊಂದಿಗೆ ಮಕ್ಕಳಲ್ಲಿ ನಾಟಕ ರಂಗಕಲೆಗಳನ್ನು ಬೆಳಸುವುದರಿಂದ ಸುಸಂಸ್ಕೃತರನ್ನಾಗಿಸುವ ಮೂಲಕ ಕ್ರೀಯಾಶೀಲ ವ್ಯಕ್ತಿಯನ್ನಾಗಿಸಲು ಸಾಧ್ಯವೆಂದರು.


ಸಮಾರೋಪ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಖೃತರಾದ ಗುಡ್ಡಪ್ಪಜೋಗಿ,ಲಕ್ಷಿö್ಮ ಎಲ್,ಹಾಗೂ ವೀರಶೈವ ಸಮಾಜದ ಮುಖಂಡ ಬೆಳಕೋಡು ಹಾಲಸ್ವಾಮಿಗೌಡರು,ಜಾನಪದ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಮುಖ ಮಂಜುನಾಥ ಕಾಮತ್,ಎಸ್.ಡಿ.ಎಂ.ಸಿ.ನಿರ್ದೇಶಕರಾದ ದಿವ್ಯ,ಲಕ್ಷಿö್ಮ,ಯಶಸ್ವತಿ ಜೈನ್,ಶಿಬಿರದ ನಿರ್ದೇಶಕ ಡಾ.ಗಣೇಶ್ ಕೆಂಚನಾಲ. ಇನ್ನಿತರರು ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು,



ಬಸವೇಶ್ವರ ಭಾವಚಿತ್ರಕ್ಕೆ ಪುಪ್ಪಾರ್ಚಣೆ ಮೂಲಕ ಅರಂಭಗೊಂಡ ಈ ಕಾರ್ಯಕ್ರಮ ಶಿಬಿರದ ಶಿಬಿರಾರ್ಥಿಗಳು ಪ್ರದರ್ಶಿಸಿದ ವಿವಿಧ ಕಾರ್ಯಕ್ರಮಗಳು ಪ್ರೇಕ್ಷಕರ ಗಮನಸೆಳೆಯಿತು.

ಭಾವೈಕ್ಯತೆಯ ಸಂಕೇತವಾಗಿ ಹಣತೆ ಹಚ್ಚುವ ಮೂಲಕ ಕಾರ್ಯಕ್ರಮ ಸುಸಂಪನ್ನಗೊಂಡಿತು.

ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ  ವಿದ್ಯಾರ್ಥಿನಿಗೆ ಸನ್ಮಾನ  :ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ ಶಿವಮೊಗ್ಗ ವಿಕಾಸ ವಿದ್ಯಾಸಂಸ್ಥೆಯ ದ್ವಿತೀಯ  ಪಿ.ಯು.ಸಿ. ವಿದ್ಯಾರ್ಥಿನಿ ಕು.ಅನ್ವಿತ ಡಿ.ಎನ್. ಹಾಗೂ ರಿಪ್ಪನ್‌ಪೇಟೆ ಸುತ್ತಮುತ್ತ ಚಿತ್ರೀಕರಣಗೊಳ್ಳುತ್ತಿರುವ ಸಮರಸ ಚಿತ್ರತಂಡ ನಟಿ ಅಭಿನಯ ಹಾಗೂ ಲಕ್ಷಿö್ಮಭಟ್ ಚಿತ್ರ ನಿರ್ದೇಶಕ ರಾಘವೇಂದ್ರ ಹಿರಿಯೂರು ಇವರು ಗಳನ್ನು ಸನ್ಮಾನಿಸಲಾಯಿತು.

ಆರ್.ಡಿ.ಶೀಲಾ ಸ್ವಾಗತಿಸಿದರು.ಡಾ.ಗಣೇಶ್ ಕೆಂಚನಾಲ ಕಾರ್ಯಕ್ರಮ ನಿರೂಪಿಸಿದರು,

ಇದೇ ಸಂಧರ್ಭದಲ್ಲಿ ರಿಪ್ಪನ್‌ಪೇಟೆಯ ಹಿರಿಯ ಪತ್ರಕರ್ತ ಕೆ ಎಂ ಬಸವರಾಜ್ ರವರ ಜನ್ಮದಿನವನ್ನು ಮಳಲಿ ಶ್ರೀಗಳ ಸಮ್ಮುಖದಲ್ಲಿ ಆಚರಿಸಲಾಯಿತು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.