Headlines

ಜ.30 ರಂದು ಶಿರಾಳಕೊಪ್ಪ ಬಂದ್ ಗೆ ಹಿಂದೂ ಜಾಗರಣ ವೇದಿಕೆ ಕರೆ – ಬಂದ್ ವಿರೋಧಿಸಿ ಠಾಣೆ ಮುಂದೆ ಧರಣಿ ನಡೆಸಲು ಮುಂದಾದ ಅಂಜುಮನ್ ಇಸ್ಲಾಂ ಕಮಿಟಿ|

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ನಾಳೆ ಹಿಂದೂ ಜಾಗರಣಾ ವೇದಿಕೆ ಬಂದ್ಗೆ ಕರೆಕೊಟ್ಟಿದೆ. ಈ ಸಂಬಂಧ ನಿನ್ನೆ ಸುದ್ದಿಗೋಷ್ಟಿ ಸಹ ನಡೆಸಿದೆ. ಜ.30ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಶಿರಾಳಕೊಪ್ಪ ಬಂದ್‌ ನಡೆಸಲಾಗುವುದು ಎಂದು ಮಾಹಿತಿ ನೀಡಿದೆ.




ಪೊಲೀಸರ ದೌರ್ಜನ್ಯ ಮತ್ತು ಶಿರಾಳಕೊಪ್ಪದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದು ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ(ಹಿಂಜಾವೇ)  ಶಿರಾಳಕೊಪ್ಪ ಬಂದ್ ಗೆ ಕರೆಕೊಟ್ಟಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.

ಬಂದ್ ನಿಮಿತ್ತ ಸ್ವಯಂ ಘೋಷಿತ ಅಂಗಡಿ‌ಮುಂಗಟ್ಟು ಮುಚ್ಚಲು ಕರೆ ನೀಡಲಾಗಿದೆ. ಗೋಹತ್ಯೆ, ಲವ್ ಜಿಹಾದ್, ಹಿಂದೂಗಳ ರಕ್ಷಣೆ ಮಾಡಬೇಕಿದ್ದ ಪೊಲೀಸರು ಮೂಲಭೂತವಾದಿಗಳ ಕೈಗೊಂಬೆಯಾಗಿದ್ದಾರೆ. ನಾಲ್ವರು ಅಧಿಕಾರಿಗಳನ್ನ ವಜಾಗೊಳಿಸಬೇಕು ಎಂದು ಆಗ್ರಹಿಸಿ ವಿವಿಧ ಬೇಡಿಕೆ ಈಡೇರಿಸುವಂತೆ ಹಿಂದೂ ಸಂಘಟನೆ ಬಂದ್ ನಡೆಸುತ್ತಿದೆ.




ಸ್ವಯಂ ಘೋಷಿತ ಬಂದ್ ಗೆ ಕರೆ ನೀಡಲಾಗಿದೆ. ನಾಳೆ ವಾಲ್ಮೀಕಿ ಸಮುದಾಯ ಭವನದಿಂದ ಶಿರಾಳಕೊಪ್ಪ ಠಾಣೆಯ ವರೆಗೆ ಕಾಲ್ನಡೆಗೆ ಜಾಥ ನಡೆಸಲಾಗುತ್ತಿದೆ. ಸಾವಿರಾರು ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಈ ಕುರಿತು ನಿನ್ನೆ ಹಿಂಜಾವೇ ಜಿಲ್ಲಾ ಅಧ್ಯಕ್ಷ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಇದನ್ನ ವಿರೋಧಿಸಿ ಅಂಜುಮನ್ ಇ-ಇಸ್ಲಾಮ್ ಕಮಿಟಿ ಶಿರಾಳಕೊಪ್ಪ ಸಬ್ ಇನ್ ಸ್ಪೆಕ್ಟರ್ ಮಂಜುನಾಥ್ ಕುರಿಯವರಿಗೆ ಮನವಿ ಮಾಡಿ ಹಿಂದೂ ಜಾಗರಣ ವೇದಿಕೆ ಶಿರಾಳಕೊಪ್ಪದಲ್ಲಿ ಮುಸ್ಲೀಂ ಸಮುದಾಯ ಶೇ. 72 ರಷ್ಟಿದೆ ಎನ್ನುತ್ತಿದೆ ಇದು ಸತ್ಯಕ್ಕೆ ದೂರವಾಗಿದೆ. ಹಿಂದೂ ಮುಸ್ಲೀಂ ಸೌಹಾರ್ಧವಾಗಿ ಶಿರಾಳಕೊಪ್ಪದಲ್ಲಿ ಬದುಕುತ್ತಿದ್ದಾರೆ. ಹಿಂಜಾವೇ ಈ ಸೌಹಾರ್ಧವನ್ನು ಹಾಳುಗೆಡವಲು ಪ್ರಯತ್ನಿಸುತ್ತಿದೆ.




ಪೊಲೀಸ್ ಅಧಿಕಾರಿಗಳು ನಾಳೆ ನಡೆಯುವ ಬಂದ್ ನ್ನ ತಡೆಯದಿದ್ದರೆ ಶಿರಾಳಕೊಪ್ಪ ಪೊಲೀಸ್ ಠಾಣೆಯ ಮುಂದೆ ಧರಣಿ ಕೂರುವುದಾಗಿದೆ ಸಂಘಟನೆ ಎಚ್ಚರಿಸಿದೆ. ಇದಕ್ಕೂ ಮೊದಲು ಎರಡೂ ಸಮುದಾಯವನ್ನ ಕರೆಯಿಸಿ ಶಾಂತಿ ಸಭೆ ನಡೆಸಬೇಕು ಎಂದು ಸಂಘಟನೆ ಕೋರಿದೆ.

Leave a Reply

Your email address will not be published. Required fields are marked *