ರಿಪ್ಪನ್‌ಪೇಟೆ : ಇಲ್ಲಿನ ಮೂಗುಡ್ತಿ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಂಬಂದಿಸಿದ ನವೀಕರಣಗೊಳ್ಳುತಿದ್ದ ದೇವಸ್ಥಾನದ ಕಟ್ಟಡವನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಸಂಬಂದಪಟ್ಟವರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಗುಡ್ತಿ ಗ್ರಾಮದ ಪವನ್ ಕುಮಾರ್ ಎಂಬುವವರು ತಮ್ಮ ಜಾಗದಲ್ಲಿ ಮನೆ ದೇವರಾದ ಪಂಜುರ್ಲಿ ಹಾಯ್ ಗುಳಿ ಮತ್ತು ಮರ್ಲುಚಿಕ್ಕು ದೇವರುಗಳನ್ನು ಹಲವಾರು ವರ್ಷಗಳಿಂದ ಆರಾಧನೆ ಮಾಡಿಕೊಂಡು ಬರುತ್ತಿದ್ದು ಇತ್ತೀಚಿಗೆ ದೇವರ ಅಣತಿಯಂತೆ ನೂತನ ಕಟ್ಟಡವನ್ನು ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಿಸಲಾಗುತಿತ್ತು.ಇನ್ನೂ ಹದಿನೈದು ದಿನಗಳಲ್ಲಿ ಪ್ರತಿಷ್ಠಾನ ಕಾರ್ಯಕ್ರಮ ನೆರವೇರಬೇಕಾಗಿತ್ತು.
ಸದರಿ ಜಾಗದ ವಿಚಾರ ನ್ಯಾಯಲಯದ ಮೆಟ್ಟಿಲೇರಿ ಪವನ್ ಕುಮಾರ್ ರವರ ಪರವಾಗಿ ನ್ಯಾಯಾಲಯದಿಂದ 23/2018 ಖಾಯಂ ಪ್ರತಿಬಂಧಾಕಾಜ್ಞೆ ಇರುತ್ತದೆ.ಈ ಹಿನ್ನಲೆಯಲ್ಲಿ ದೇವಸ್ಥಾನದ ಕಾಮಗಾರಿಯನ್ನು ಕಳೆದ ಮೂರು ತಿಂಗಳಿಂದ ನಡೆಸಲಾಗುತಿತ್ತು.
ಶನಿವಾರ ಸಂಜೆ ಜಾಗದ ವ್ಯಾಜ್ಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಏಕಾಏಕಿ ನ್ಯಾಯಾಲಯದ ಖಾಯಂ ಪ್ರತಿಬಂಧಾಕಾಜ್ಞೆ ಇರುವ ಸ್ಥಳಕ್ಕೆ ನುಗ್ಗಿ ದೇವಸ್ಥಾನದ ಕಟ್ಟಡವನ್ನು ನೆಲಸಮಗೊಳಿಸಿ, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.