ತರಗತಿಯಲ್ಲಿ ಹಿಜಾಬ್ ಧರಿಸಿ ವಿಧ್ಯಾರ್ಥಿನಿಯರು ಹಾಜರ್ : ಸಿಹಿ ಹಂಚಿ, ಹಿಜಾಬ್ ಗೆ ಅಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು
ರಿಪ್ಪನ್‌ಪೇಟೆ: ಶಾಸಕ ಹರತಾಳು ಹಾಲಪ್ಪರ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಬಿಜೆಪಿ ಕಾರ್ಯಕರ್ತರು ಶ್ರೀಸಿದ್ಧಿವಿನಾಯಕ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಸಿಹಿ ವಿತರಿಸುವ ಸಂದರ್ಭದಲ್ಲಿ ಹಿಜಾಬ್‌ಗೆ ಆಕ್ಷೇಪವ್ಯಕ್ತ ಪಡಿಸಿರುವ ಘಟನೆ ಇಂದು ನಡೆದಿದೆ. ವಿಶೇಷ ಪೂಜೆಯ ನಂತರ ಪಕ್ಕದ ಸರ್ಕಾರಿ ಶಾಲೆಗೆ ತೆರೆಳಿದ ಬಿಜೆಪಿ ಮುಖಂಡರ ತಂಡ ತರಗತಿಯ ಒಳಗಡೆ ಮಕ್ಕಳಿಗೆ ಸಿಹಿ ಹಂಚುವ ಸಮಯದಲ್ಲಿ ಕೆಲವಿದ್ಯಾರ್ಥಿನಿಯರು ಹಿಜಾಬ್ ಧರಿಸಿರುವುದು ಗಮನಿಸಿದ್ದಾರೆ. ಅಸಮಧಾನಗೊಂಡ ಮುಖಂಡರು ಮುಖ್ಯಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು…